ಬೆಂಗಳೂರು: ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ‘ಅಪ್ಪು’ (Appu) ಸಿನಿಮಾ ಮರು ಬಿಡುಗಡೆಯಾಗಿದ್ದು, ನರ್ತಕಿ ಥಿಯೇಟರ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Rajkumar) ಸಿನಿಮಾ ವೀಕ್ಷಿಸಿದರು.
ಮಕ್ಕಳಾದ ಧೃತಿ ಮತ್ತು ವಂದಿತಾ ಜೊತೆ ಅಶ್ವಿನಿ ಪುನೀತ್ ರಾಜಕುಮಾರ್ ‘ಅಪ್ಪು’ ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. 23 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಅಪ್ಪು ಸಿನಿಮಾಗೆ ಇದ್ದ ಕ್ರೇಜ್ ಈಗಲೂ ಇರುವುದನ್ನು ನೋಡಿ ಅಶ್ವಿನಿ ಭಾವುಕರಾಗಿದ್ದರು. ಬೆಳ್ಳಿಪರದೆಯ ಮೇಲೆ ಪುನೀತ್ ಅವರನ್ನು ನೋಡುತ್ತಿದ್ದಂತೆ ಅಶ್ವಿನಿ ಮತ್ತು ಮಕ್ಕಳಾದ ಧೃತಿ, ವಂದಿತಾ ಭಾವುಕರಾಗಿದ್ದಾರೆ. ಹೀಗಾಗಿ 10 ನಿಮಿಷಗಳ ಕಾಲ ಸಿನಿಮಾ ನೋಡಿ ತೆರಳಿದ್ದಾರೆ.