ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಸಿನಿಮಾ-ಮನರಂಜನೆ

ಸಾವಿರಾರು ಭಾವಗಳಿಗೆ ಜೀವ ತುಂಬಿದ್ದ ಅದ್ಭುತ ಚೇತನ ಆಶಾ ಭೋಂಸ್ಲೆ!

April 12, 2026
Share on WhatsappShare on FacebookShare on Twitter

ಭಾರತೀಯ ಸಂಗೀತ ಲೋಕದ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಅಲ್ಲಿ ಕೇಳಿಬರುವ ಒಂದು ಅದ್ಭುತ ಧ್ವನಿ ಆಶಾ ಭೋಂಸ್ಲೆ ಅವರದ್ದು. ಅದು ಕೇವಲ ಧ್ವನಿಯಾಗಿರಲಿಲ್ಲ, ಅಲ್ಲೊಂದು ಅದ್ಭುತ ಶಕ್ತಿಯಿತ್ತು. ಎಂಥವರನ್ನೂ ಸೆಳೆಯುವ ತಾಕತ್ತು ಅದಕ್ಕಿತ್ತು.

ದಂತಕಥೆ ಲತಾ ಮಂಗೇಶ್ಕರ್ ಅವರ ಕಿರಿಯ ಸಹೋದರಿಯಾಗಿ ಜನಿಸಿದ ಆಶಾ ಅವರ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಪ್ರತಿಭೆಗಳ ಕಣವಾಗಿದ್ದ ಅವರದ್ದು, ಸವಾಲುಗಳು ಹಾಗೂ ಛಲದ ಹಾದಿಯಾಗಿತ್ತು. ಅಕ್ಕನ ಅಗಾಧ ಯಶಸ್ಸಿನ ನೆರಳಿನಲ್ಲಿ ಕಳೆದುಹೋಗದೆ, ತನ್ನದೇ ಆದ ವಿಶಿಷ್ಟ ‘ಸ್ವರ ಸಾಮ್ರಾಜ್ಯ’ವನ್ನು ಕಟ್ಟಿಕೊಂಡ ಈ ಗಾನಕೋಗಿಲೆಯ ಪಯಣ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ.

ಅಕ್ಕನ ನೆರಳಿನಿಂದ ಅನನ್ಯತೆಯತ್ತ..!

ಆಶಾ ಅವರ ಸಂಗೀತ ಜೀವನ ಆರಂಭವಾಗಿದ್ದು ಕೇವಲ 9 ವರ್ಷದ ಬಾಲಕಿಯಾಗಿದ್ದಾಗ. ಆಗಲೇ ಅಕ್ಕ ಲತಾ ಅವರು ಸಂಗೀತ ಲೋಕದ ಧ್ರುವತಾರೆಯಾಗಿ ಮಿಂಚುತ್ತಿದ್ದರು. ಆರಂಭದ ದಿನಗಳಲ್ಲಿ ಆಶಾ ಅವರಿಗೆ ಸಿಗುತ್ತಿದ್ದ ಅವಕಾಶಗಳು ಕೇವಲ ಎರಡನೇ ದರ್ಜೆಯವು ಎನ್ನಲಾಗುತ್ತಿತ್ತು. ಅಕ್ಕನ ಧ್ವನಿಗೆ ಮೆಲೊಡಿ ಹಾಡುಗಳು ಮೀಸಲಾಗಿದ್ದರೆ, ಆಶಾ ಅವರಿಗೆ ದಕ್ಕುತ್ತಿದ್ದುದು ತುಂಟಾಟದ, ಕ್ಯಾಬರೆ ಅಥವಾ ನೃತ್ಯದ ಹಾಡುಗಳು. ಆದರೆ, ಆ ಸವಾಲನ್ನೇ ವರವಾಗಿ ಸ್ವೀಕರಿಸಿದ ಆಶಾ, ಅಕ್ಕನ ನೆರಳಿನಿಂದ ಹೊರಬಂದು ತನ್ನ ಧ್ವನಿಯಲ್ಲಿನ ಮಾದಕತೆ, ವೈವಿಧ್ಯತೆ ಮತ್ತು ತಾಂತ್ರಿಕ ನೈಪುಣ್ಯತೆಯ ಮೂಲಕ ಹೊಸ ಇತಿಹಾಸ ಬರೆದರು. ‘ಲತಾ ಅವರ ತಂಗಿ’ ಎಂಬ ಹಣೆಪಟ್ಟಿಯನ್ನು ಮೀರಿ ‘ಆಶಾ ಭೋಂಸ್ಲೆ’ ಎಂಬ ಬ್ರ್ಯಾಂಡ್ ಸೃಷ್ಟಿಸಿದರು

ಆ ಧ್ವನಿಯಲ್ಲಿತ್ತು ಮಾಂತ್ರಿಕಶಕ್ತಿ

ಆಶಾ ಅವರ ಧ್ವನಿಯಲ್ಲಿ ಒಂದು ಮ್ಯಾಜಿಕ್ ಇತ್ತು. ಅದು ‘ದಮ್ ಮಾರೋ ದಮ್’ ಎಂದು ಕಿರುಚಬಲ್ಲದು, ‘ಉಮ್ರಾವ್ ಜಾನ್’ನಂಥ ಚಿತ್ರದ ಗಜಲ್‌ಗಳಲ್ಲಿ ಕಣ್ಣೀರು ತರಿಸಬಲ್ಲದು. ಹಿರಿಯ ಸಂಗೀತ ನಿರ್ದೇಶಕರು ಅವರ ಮೇಲೆ ನಂಬಿಕೆ ಇಟ್ಟಾಗ, ಆಶಾ ಅದನ್ನು ರಾಷ್ಟ್ರ ಪ್ರಶಸ್ತಿಗಳ ಮೂಲಕ ಸಾಬೀತುಪಡಿಸಿದರು. ಶಾಸ್ತ್ರೀಯ ಸಂಗೀತದಿಂದ ಹಿಡಿದು ಪಾಪ್ ಸಂಗೀತದವರೆಗೆ ಅವರು ಸಾಗದ ಹಾದಿಯಿಲ್ಲ. ವಿಶ್ವದಲ್ಲೇ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕಿ ಎಂಬ ಗಿನ್ನೆಸ್ ದಾಖಲೆ ಅವರ ಹೆಸರಲ್ಲಿದೆ ಎನ್ನುವುದೇ ಅವರ ನಿರಂತರ ಪರಿಶ್ರಮಕ್ಕೆ ಸಾಕ್ಷಿ.

ಬಂಡಾಯದ ಬದುಕು

ಆಶಾ ಅವರ ವೈಯಕ್ತಿಕ ಜೀವನವೂ ಅವರ ಹಾಡುಗಳಂತೆಯೇ ಏಳುಬೀಳುಗಳಿಂದ ಕೂಡಿತ್ತು. ಕೇವಲ 16ನೇ ವಯಸ್ಸಿನಲ್ಲಿ ಕುಟುಂಬದ ವಿರೋಧವನ್ನೂ ಮೀರಿ ಪ್ರೇಮವಿವಾಹವಾದ ಸಾಹಸಿ ಅವರು. ಆ ಸಂಬಂಧ ಮುರಿದುಬಿದ್ದಾಗ, ಮೂವರು ಮಕ್ಕಳೊಂದಿಗೆ ತವರಿಗೆ ಮರಳಿದರೂ ಅವರು ಸೋಲೊಪ್ಪಲಿಲ್ಲ. ಬದುಕಿನ ಕಠಿಣ ಸವಾಲುಗಳ ನಡುವೆಯೂ ಅವರು ‘ಭೋಂಸ್ಲೆ’ ಎಂಬ ಹೆಸರನ್ನು ಅಳಿಸಿಕೊಳ್ಳದೆ ಅದನ್ನು ಯಶಸ್ಸಿನ ಶಿಖರಕ್ಕೆ ಏರಿಸಿದರು. ನಂತರ ಆರ್.ಡಿ. ಬರ್ಮನ್ ಅವರೊಂದಿಗೆ ನಡೆದ ಅವರ ಜೀವನದ ಎರಡನೇ ಪರ್ವವು ಸಂಗೀತ ಲೋಕಕ್ಕೆ ಅನೇಕ ಅಮರ ಗೀತೆಗಳನ್ನು ಕೊಡುಗೆಯಾಗಿ ನೀಡಿತು.

ಸುವರ್ಣ ಯುಗದ ಕೊನೆಯ ಕೊಂಡಿ

ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ, ಕಿಶೋರ್ ಕುಮಾರ್ ಮತ್ತು ಮುಕೇಶ್ ಅವರಂತಹ ದೈತ್ಯ ಪ್ರತಿಭೆಗಳ ನಡುವೆ ಹಿರಿಯಕ್ಕನ ಚಾಕಚಕ್ಯತೆ ಮತ್ತು ಕಿರಿಯಕ್ಕನ ತುಂಟಾಟ ಎರಡನ್ನೂ ಮೈಗೂಡಿಸಿಕೊಂಡವರು ಆಶಾ. ಆ ಯುಗದ ಕೊನೆಯ ಕೊಂಡಿಯಾಗಿ ಅವರು ಭಾರತೀಯ ಚಿತ್ರರಂಗದ ಏರಿಳಿತಗಳನ್ನು ಹತ್ತಿರದಿಂದ ಕಂಡವರು.
ಆಶಾ ಭೋಂಸ್ಲೆ ಎಂದರೆ ಕೇವಲ ಹಾಡುಗಾರ್ತಿಯಲ್ಲ; ಅವರು ಹೋರಾಟದ ಸಂಕೇತ, ಪ್ರತಿಭೆಯ ಪರ್ಯಾಯ ನಾಮ. ಅವರ ನಿಧನದ ಮೂಲಕ ಅವರ ಅವರ ಭೌತಿಕ ಕಾಯ ಮರೆಯಾದರೂ, ಆ ಧ್ವನಿ ಮಾತ್ರ ಎಲ್ಲರೆದೆಯಲ್ಲೂ ಅಮರವಾಗಿ ಉಳಿಯಲಿದೆ.

ಇದನ್ನೂ ಓದಿ : ಸಂಗೀತ ಲೋಕದ ಧ್ರುವತಾರೆ ಅಸ್ತಂಗತ – ಗಾಯಕಿ ಆಶಾ ಭೋಂಸ್ಲೆ ಇನ್ನಿಲ್ಲ

Tags: a wonderful soul who brought thousands of emotions to life!Asha BhosleKarnataka News beat
SendShareTweet
Previous Post

ಸಂಗೀತ ಲೋಕದ ಧ್ರುವತಾರೆ ಅಸ್ತಂಗತ – ಗಾಯಕಿ ಆಶಾ ಭೋಂಸ್ಲೆ ಇನ್ನಿಲ್ಲ

Next Post

ಪ್ರಯಾಣಿಕರೇ ಗಮನಿಸಿ..ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ ಬಂದ್!

Related Posts

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಗೆ ಟಗರು ಸಿದ್ದು ಜೈ..!
ಸಿನಿಮಾ-ಮನರಂಜನೆ

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಗೆ ಟಗರು ಸಿದ್ದು ಜೈ..!

‘ಡಕಾಯತ್’ 50 ಕೋಟಿ ಕೊಳ್ಳೆ..?
ಸಿನಿಮಾ-ಮನರಂಜನೆ

‘ಡಕಾಯತ್’ 50 ಕೋಟಿ ಕೊಳ್ಳೆ..?

“ಜಿನುಗೋ ಮಳೆ” ರೋಮ್ಯಾನ್ಸ್ ಕಿಕ್..!
ಸಿನಿಮಾ-ಮನರಂಜನೆ

“ಜಿನುಗೋ ಮಳೆ” ರೋಮ್ಯಾನ್ಸ್ ಕಿಕ್..!

‘ಲವ್ ಮಾಕ್ಟೇಲ್-3’ 25ನೇ ದಿನ ಬ್ಯಾಷ್..!
ಸಿನಿಮಾ-ಮನರಂಜನೆ

‘ಲವ್ ಮಾಕ್ಟೇಲ್-3’ 25ನೇ ದಿನ ಬ್ಯಾಷ್..!

ಸಂಗೀತ ಲೋಕದ ಧ್ರುವತಾರೆ ಅಸ್ತಂಗತ – ಗಾಯಕಿ ಆಶಾ ಭೋಂಸ್ಲೆ ಇನ್ನಿಲ್ಲ
ಸಿನಿಮಾ-ಮನರಂಜನೆ

ಇಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಆಶಾ ಭೋಸ್ಲೆ ಅಂತ್ಯಕ್ರಿಯೆ!

ಮೋಹಕ ತಾರೆಯ ಮನಸ್ಸು ಮಿಡಿದಿದ್ದು ಯಾರಿಗೆ?
ಸಿನಿಮಾ-ಮನರಂಜನೆ

ಮೋಹಕ ತಾರೆಯ ಮನಸ್ಸು ಮಿಡಿದಿದ್ದು ಯಾರಿಗೆ?

Next Post
ಪ್ರಯಾಣಿಕರೇ ಗಮನಿಸಿ..ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ ಬಂದ್!

ಪ್ರಯಾಣಿಕರೇ ಗಮನಿಸಿ..ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ ಬಂದ್!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಪ್ರಾಣಬಿಟ್ಟ ಯುವಕ!

ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಪ್ರಾಣಬಿಟ್ಟ ಯುವಕ!

ಕರ್ನಾಟಕ ಹೈಕೋರ್ಟ್‌ನಲ್ಲಿ 90 ಸಿವಿಲ್ ನ್ಯಾಯಾಧೀಶರ ನೇಮಕಾತಿ : 1.36 ಲಕ್ಷ ರೂ. ಸಂಬಳ

ಕರ್ನಾಟಕ ಹೈಕೋರ್ಟ್‌ನಲ್ಲಿ 90 ಸಿವಿಲ್ ನ್ಯಾಯಾಧೀಶರ ನೇಮಕಾತಿ : 1.36 ಲಕ್ಷ ರೂ. ಸಂಬಳ

ನಿಸ್ಸಾನ್ – ರೆನಾಲ್ಟ್ ಕಡೆಯಿಂದ 6 ಹೊಸ ಸಿಎನ್‌ಜಿ ಕಾರುಗಳ ಲಗ್ಗೆ : ಭಾರತದ ಮಾರುಕಟ್ಟೆಯಲ್ಲಿ ಹೊಸ ಸಂಚಲನ

ನಿಸ್ಸಾನ್ – ರೆನಾಲ್ಟ್ ಕಡೆಯಿಂದ 6 ಹೊಸ ಸಿಎನ್‌ಜಿ ಕಾರುಗಳ ಲಗ್ಗೆ : ಭಾರತದ ಮಾರುಕಟ್ಟೆಯಲ್ಲಿ ಹೊಸ ಸಂಚಲನ

ಕಳೆದ ವರ್ಷ ಬೆಳ್ಳಿ ಮೇಲೆ ಲಕ್ಷ ರೂ. ಹೂಡಿಕೆ ಮಾಡಿದ್ದರೆ ಈಗ 2.65 ಲಕ್ಷ ರೂ – ಏನಿದು ಅಕ್ಷಯ ತೃತೀಯ ಮ್ಯಾಜಿಕ್?

ಕಳೆದ ವರ್ಷ ಬೆಳ್ಳಿ ಮೇಲೆ ಲಕ್ಷ ರೂ. ಹೂಡಿಕೆ ಮಾಡಿದ್ದರೆ ಈಗ 2.65 ಲಕ್ಷ ರೂ – ಏನಿದು ಅಕ್ಷಯ ತೃತೀಯ ಮ್ಯಾಜಿಕ್?

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಪ್ರಾಣಬಿಟ್ಟ ಯುವಕ!

ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಪ್ರಾಣಬಿಟ್ಟ ಯುವಕ!

ಕರ್ನಾಟಕ ಹೈಕೋರ್ಟ್‌ನಲ್ಲಿ 90 ಸಿವಿಲ್ ನ್ಯಾಯಾಧೀಶರ ನೇಮಕಾತಿ : 1.36 ಲಕ್ಷ ರೂ. ಸಂಬಳ

ಕರ್ನಾಟಕ ಹೈಕೋರ್ಟ್‌ನಲ್ಲಿ 90 ಸಿವಿಲ್ ನ್ಯಾಯಾಧೀಶರ ನೇಮಕಾತಿ : 1.36 ಲಕ್ಷ ರೂ. ಸಂಬಳ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat