ಬಹು ಅಂಗಾಂಗ ವೈಫಲ್ಯದಿಂದ ಬಲಲುತ್ತಿದ್ದ ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ (92) ಭಾನುವಾರ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಆಶಾ ಭೋಸ್ಲೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಎದೆ ಸೋಂಕು ಮತ್ತು ಬಳಲಿಕೆಯ ಹಿನ್ನೆಲೆ ಶ್ರೀಮತಿ ಭೋಸ್ಲೆ ಅವರನ್ನು ಶನಿವಾರ ಸಂಜೆ ಮುಂಬೈನ ಬ್ರೀಚ್ ಕ್ಯಾಂಡಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು . ಅವರಿಗೆ ಹೃದಯಾಘಾತ ಮತ್ತು ಶ್ವಾಸಕೋಶದ ತೊಂದರೆಗಳೂ ಇದ್ದವು ಎಂದು ವೈದ್ಯರು ತಿಳಿಸಿದ್ದರು.
ದಿವಂಗತ ದಂತಕಥೆ ಗಾಯಕಿ ಲತಾ ಮಂಗೇಶ್ಕರ್ ಅವರ ತಂಗಿ ಶ್ರೀಮತಿ ಭೋಸ್ಲೆ, ಎಂಟು ದಶಕಗಳ ವೃತ್ತಿಜೀವನದಲ್ಲಿ ವಿವಿಧ ಭಾಷೆಗಳಲ್ಲಿ 12,500 ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ, ಮೀನಾ ಕುಮಾರಿ, ಮಧುಬಾಲಾ ಮತ್ತು ಜೀನತ್ ಅಮನ್, ಕಾಜೋಲ್, ಊರ್ಮಿಳಾ ಮಾತೋಂಡ್ಕರ್ ಮತ್ತು ಪದ್ಮಿನಿ ಮತ್ತು ವೈಜಯಂತಿಮಾಲಾ ಅವರಂತಹ ದಕ್ಷಿಣ ತಾರೆಯರಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.
ಆಶಾ ಭೋಸ್ಲೆ ಅವರು ಬರೋಬ್ಬರಿ 80 ವರ್ಷದ ತಮ್ಮ ಗಾಯನದ ಬದುಕನ್ನು ತೊರೆದು, ಹಾಡು ನಿಲ್ಲಿಸಿದ್ದಾರೆ. ಅವರ ಕೋಟ್ಯಂತರ ಅಭಿಮಾನಿಗಳಿಗೆ ಈಗ ಬರೀ ಶೋಕಗೀತೆಯೇ ಕೇಳಿಸುತ್ತಿದೆ. ಇಂದು ಬೆಳಿಗ್ಗೆ 11ರಿಂದ 3ಗಂಟೆಯವರೆಗೂ ಮುಂಬೈನ ಖಾಸಗ್ರ್ಯಾಂಡ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಆಶಾ ಪುತ್ರ ಆನಂದ್ ಭೋಸ್ಲೆ.
ಇದನ್ನೂ ಓದಿ: ದಿಗ್ಗಜ ಗಾಯಕಿ ಆಶಾ ಭೋಸ್ಲೆಗೆ ಕಂಬನಿ ಮಿಡಿದ ವಾಂಖೆಡೆ ಕ್ರೀಡಾಂಗಣ – ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ MI, RCB ಆಟಗಾರರು



















