ಬೆಂಗಳೂರು: ಕಾಮುಕನೊಬ್ಬ ಸರಿಪೋದ ಶನಿವಾರಂ ಅಲ್ಲಾ ಸರಿಪೋದ ಮಂಗಳವಾರಂ ಚಿತ್ರದ ವಿಲನ್ ಸ್ಟೈಲ್ ನಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಬಾಲಕಿಯರಿಗೆ ಲೈಂಗಿಕ ವಿಡಿಯೋ ತೋರಿಸಿ ವಿಕೃತಿ ಮೆರೆಯುತ್ತಿದ್ದ ಆ ಕಾಮುಕನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರು ಕಾಮುಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಕೆ.ಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿ ಪ್ರತಿ ಮಂಗಳವಾರ ಬಂದು ಬಾಲಕಿಯರಿಗೆ ಪೋರ್ನ್ ವಿಡಿಯೋ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಕಳೆದ ಎರಡ್ಮೂರು ವಾರಗಳಿಂದಲೂ ಆರೋಪಿ ಇದೇ ರೀತಿ ಕೃತ್ಯ ಎಸಗುತ್ತಿದ್ದ. ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಉತ್ತರ ಭಾರತ ಮೂಲದ ಆರೋಪಿಯಿಂದ ಈ ಕೃತ್ಯ ನಡೆದಿದೆ. ಈತ ಶಾಲೆ ಮುಗಿಸಿಕೊಂಡು ಬರುವ ಬಾಲಕಿಯರಿಗೆ ವಿಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಬಾಲಕಿಯರು ಪೋಷಕರಿಗೆ ಹೇಳಿಕೊಂಡಿದ್ದರು.
ಪ್ರತಿ ಮಂಗಳವಾರದಂತೆ ನಿನ್ನೆ ಕೂಡ ಕಾಮುಕ ರಸ್ತೆಯಲ್ಲಿ ನಿಂತಿದ್ದ. ಬಾಲಕಿಯರು ಶಾಲೆಯಿಂದ ಹೊರಗೆ ಬರುತ್ತಿದ್ದಂತೆ ವಿಡಿಯೋ ತೋರಿಸುತ್ತಿದ್ದ. ಕೂಡಲೇ ಬಾಲಕಿಯರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಪೋಷಕರು ಸ್ಥಳಕ್ಕೆ ಬಂದು ನೋಡಿದಾಗ ಕಾಮುಕ ಅಶ್ಲೀಲ ವಿಡಿಯೋ ನೋಡುತ್ತಿದ್ದ. ಆತನನ್ನು ಕೂಡಲೇ ಆತನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಕೆ.ಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.