ಶಿವಮೊಗ್ಗ : ಜಿಲ್ಲೆಯ ರಾಗಿಗುಡ್ಡದಲ್ಲಿ ಅನ್ಯಕೋಮಿನ ವ್ಯಕ್ತಿಯೋರ್ವನಿಂದ ಗಣಪತಿ ವಿಗೃಹ ಹಾಗೂ ನಾಗದೇವರ ವಿಗೃಹಗಳಿಗೆ ಅಪಚಾರವೆಸಗಿರುವುದಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ಆಕ್ರೋಶ ಹೊರಹಾಕಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ಅವರು, ಇದೊಂದು ದುಃಖ ಹಾಗೂ ಶೋಚನೀಯ ಸಂಗತಿ. ದೇವರ ಮೂರ್ತಿಯನ್ನು ಕಾಲಿನಿಂದ ಒದೆಯುತ್ತಾನೆ ಎಂದರೇ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತದೆ. ಶೀಘ್ರದಲ್ಲೇ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಕ್ರಮವಾಗಿ ನಿರ್ಮಾಣ ಮಾಡಿದ ಕಟ್ಟಡವನ್ನು ನೆಲಸಮ ಮಾಡಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ಹೇಳಿದ್ದಲ್ಲದೇ, ಈ ದೇವಸ್ಥಾನದ ಶುದ್ಧೀಕರಣ ಆಗಬೇಕು. ದೇವಸ್ಥಾನ ನಿರ್ಮಾಣವಾಗಬೇಕು. ಅ ಕೆಲಸ ನಾವು ಮಾಡುತ್ತೇವೆ. ಕೂಡಲೇ ಕಿಡಿಗೇಡಿಗಳನ್ನು ಬಂಧನ ಮಾಡಬೇಕು. ಇಲ್ಲವಾದಲ್ಲಿ ಶಿವಮೊಗ್ಗ ಜನರನ್ನು ಕೂಡಿಕೊಂಡು ಇದೇ ಸ್ಥಳದಲ್ಲಿ ಪಾದಯಾತ್ರೆ, ಧರಣಿ ಮಾಡುತ್ತೇವೆ ಎಂದೂ ಎಚ್ಚರಿಕೆ ನೀಡಿದ್ದಾರೆ.