ಜ್ಯುವೆಲ್ಲರಿ ಶಾಪ್ ಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದವರನ್ನು ಅರೆಸ್ಟ್ ಮಾಡುವಲ್ಲಿ ಬೆಂಗಳೂರು ಮಲ್ಲೇಶ್ವರಂ ಪೊಲೀಸರು ಯಶಸ್ವಿಯಾಗಿದ್ದಾರೆ. ಮಡಿಕೇರಿ ಮೂಲದ ರಿಚರ್ಡ್ ಬಂಧಿತ ಆರೋಪಿ, ರಿಚರ್ಡ್ ಮಲ್ಲೇಶ್ವರಂ ಬಳಿಯ ಕಾನಿಷ್ಕ್ ಜ್ಯುವೆಲ್ಲರಿಯಲ್ಲಿ ಚಿನ್ನಾಭರಣದ ಡಿಸೈನ್ ತೋರಿಸುವಂತೆ ಹೇಳಿ ನಟಿಸಿದ್ದರು. ಕೈಗೆ ಚಿನ್ನಾಭರಣ ಸಿಗುತ್ತಿದ್ದಂತೆ ಕ್ಷಣಮಾತ್ರದಲ್ಲಿ ಮಾಯವಾಗಿದ್ದಾರೆ.



















