ಬೆಂಗಳುರು : ಮನೆ ಕೆಲಸದವಳಾಗಿ ಬಂದು ಕಳ್ಳತನ ಮಾಡಿರುವ ಖತರ್ನಾಕ್ ಕಳ್ಳಿಯನ್ನು ಬಂಧಿಸಲಾಗಿದೆ.
ನೇಪಾಳದ ಮೂಲದ ಪೂಜಾ(26) ಬಂಧಿತ ಮಹಿಳೆ.
ಆಶುತೋಷ್ ಮತ್ತು ಪೂಜನ್ ದಿವೇದಿ ಅವರ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ಕಳೆದ ಜುಲೈನಲ್ಲಿ ವಾಟ್ಸಾಪ್ ಗ್ರೂಪ್ ರೆಫರೆನ್ಸ್ ಮೂಲಕ ಮನೆಗೆಲಸಕ್ಕೆ ಸೇರಿಕೊಂಡಿದ್ದಳು.
ಕೆಲಸದಾಕೆ ಪೂಜಾ ಎರಡು ತಿಂಗಳ ಹಿಂದೆ ಮನೆಯ ಕಬೋರ್ಡ್ ಕೀ ತೆಗೆದು, ಕಳ್ಳತನ ಮಾಡಿದ ನಂತರ ಅಲ್ಲೇ ಎರಡು ತಿಂಗಳು ಕೆಲಸ ಮಾಡಿ, ನಂತರ ಕೆಲಸ ಬಿಟ್ಟಿದ್ದಳು. ಆಗಸ್ಟ್ 26 ರಂದು ಮನೆಯವರು ಕಬೋರ್ಡ್ ಓಪನ್ ಮಾಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಜುಲೈನಲ್ಲಿ ಕೊನೆಯ ಬಾರಿ ಆಭರಣ ನೋಡಿದ್ದ ಮಾಲೀಕರು ಅದಾದ ಬಳಿಕ ಮೂರು ಜನ ಮನೆಗೆಲಸದವರು ಕೆಲಸ ಮಾಡಿದ್ದರು. ಪೊಲೀಸರು ದೂರಿನ ಆಧಾರದ ಮೇಲೆ ಮೂವರಿಗೂ ನೋಟಿಸ್ ನೀಡಿದ್ದರು. ನೋಟೀಸ್ ನೀಡುತ್ತಿದ್ದಂತೆ ಪೂಜಾ ಮನೆ ಖಾಲಿ ಮಾಡಿ ಪರಾರಿ ಆಗಿದ್ದಳು, ಪೊಲೀಸರು ಇನ್ನಿಬ್ಬರ ವಿಚಾರಣೆ ಮಾಡಿದ ಬಳಿಕ ಈಕೆಗಾಗಿ ಹುಡುಕಾಡಿದ್ದಾರೆ. ಬಾಣಸವಾಡಿ ಬಳಿ ಮನೆ ಮಾಡಿ ವಾಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 7 ಲಕ್ಷ ಮೌಲ್ಯದ 67 ಗ್ರಾಂ ಚಿನ್ನ 300 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.