ಬಾಗಲಕೋಟೆ: ಶಿಕ್ಷಕರ ಮಧ್ಯೆ ಕಾರ್ಯಕ್ರಮ ವಿಚಾರವಾಗಿ ಶುರುವಾದ ಜಗಳ ಚಪ್ಪಲಿ ಏಟಿನಲ್ಲಿ ಕೊನೆಯಾಗಿದೆ. ವಾಗ್ವಾದ ಜೋರಾಗಿ, ಸರ್ಕಾರಿ ಶಾಲಾ ಶಿಕ್ಷಕನಿಗೆ ಶಿಕ್ಷಕಿ ಚಪ್ಪಲಿಯಿಂದ ಹೊಡೆದಿರುವ ಆರೋಪ ಕೇಳಿ ಬಂದಿದೆ.

ಈ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಸಿದ್ಧತೆ ಕುರಿತು ಶಾಲಾ ಶಿಕ್ಷಕರ ಸಭೆ ಕರೆಯಲಾಗಿತ್ತು.
ಈ ವೇಳೆ ಕಾರ್ಯಕ್ರಮದ ಕೆಲಸ ಹಂಚಿಕೆ ವಿಚಾರದಲ್ಲಿ ಜಗಳ ಶುರುವಾಗಿದೆ. ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಶಿಕ್ಷಕ ವಸ್ತ್ರದಗೆ ಶಿಕ್ಷಕಿ ಅಮಿನಾಳ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಶಿಕ್ಷಕ ಇಲಕಲ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಶಾಲೆಯಲ್ಲಿನ ಜಗಳ ಶಮನಗೊಳಿಸಲು ಪೊಲೀಸರು ಪ್ರಯತ್ನಿಸಿದ್ದಾರೆ. ಶಿಕ್ಷಕಿ ಮೇಲೆ ಸೂಕ್ತ ಕ್ರಮಕ್ಕೆ ಶಿಕ್ಷಕ ವಸ್ತ್ರದ ಆಗ್ರಹಿಸಿದ್ದಾರೆ.