ಬೆಂಗಳೂರು ಗ್ರಾಮಾಂತರ: ಪತ್ನಿಯ ಡ್ರೆಸ್ ಹಾಗೂ ಮೇಕಪ್ ಗಾಗಿ ಗಲಾಟೆ ನಡೆದಿದ್ದು, ಪತಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala)ದ ತೊಣಚಿನಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಅಸ್ಸಾಂ ಮೂಲದ ಗುಲ್ಜರ್ ಹುಸೇನ್ ಚೌದರಿ (28) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈ ವ್ಯಕ್ತಿ ಮೂರು ವರ್ಷಗಳ ಹಿಂದೆ ಕುಲ್ಸುಮ್ ಬೇಗಂ ಎಂಬುವವರ ಜೊತೆ ಮದುವೆ ಮಾಡಿಕೊಂಡಿದ್ದ. ಇಬ್ಬರು ಸುಖ ಜೀವನ ನಡೆಸುವುದಕ್ಕಾಗಿ ನೆಲಮಂಗಲಕ್ಕೆ ಬಂದಿದ್ದರು. ಈ ವೇಳೆ ಗುಲ್ಜರ್ ಖಾಸಗಿ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಡ್ರೈವರ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಆದರೆ, ಬಟ್ಟೆ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಬೇಸರಗೊಂಡ ಗುಲ್ಜರ್, ತನ್ನ ಪತ್ನಿ ಮಲಗಿದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.