2011ರಿಂದ ಅರೆಹೊಳೆ ಪ್ರತಿಷ್ಠಾನವು, ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಇತರೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಅರೆಹೊಳೆಯಲ್ಲಿ ಆರಂಭವಾದರೂ ಮಂಗಳೂರನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿರುವ ಈ ಪ್ರತಿಷ್ಠಾನ ಅತಿ ಕಡಿಮೆ ಅವಧಿಯಲ್ಲೇ ಜನಮಾನಸದಲ್ಲಿ ನೆಲೆ ಕಂಡುಕೊಂಡಿದೆ.
ಅರೆಹೊಳೆ ಮತ್ತು ಮಂಗಳೂರಲ್ಲಿ ನಿರಂತರವಾಗಿ ನಾಟಕೋತ್ಸವ, ನೃತ್ಯೋತ್ಸವವನ್ನು ಆಯೋಜಿಸಿಕೊಂಡು ಬಂದಿದೆ. ಇದರೊಂದಿಗೆ ವಿವಿಧೆಡೆ ನೃತ್ಯ ನಾಟಕ ಮತ್ತು ಯಕ್ಷಗಾನ ತರಗತಿಗಳನ್ನು ಆಯೋಜಿಸುತ್ತಿದ್ದಾರೆ. ಈಗಾಗಲೇ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆ ಭಾಗಿಯಾಗಿ ಪ್ರಯೋಜನ ಪಡೆದಿದ್ದಾರೆ. ಅರೆಹೊಳೆಯಲ್ಲಿ ವೃತ್ತಿಪರ ರಂಗ ಅಧ್ಯಯನ ಕೇಂದ್ರ ಹಾಗೂ ರಂಗ ಮಂದಿರವೂ ಇದೆ.
ಅರೆಹೊಳೆ ಪ್ರತಿಷ್ಠಾನದ ಅಂಗಸಂಸ್ಥೆಯಾಗಿ ನಂದಗೋಕುಲ ಮತ್ತು ರಂಗ ಶಿಕ್ಷಣ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು ಇದರ ಭಾಗವಾಗಿ ನಂದಗೋಕುಲ ನೃತ್ಯ ತಂಡವು ಈಗಾಗಲೇ ರಾಜ್ಯದ ಅನೇಕ ಕಡೆ ನೃತ್ಯ ಪ್ರದರ್ಶನ ನೀಡಿ ಹೆಸರು ಗಳಿಸಿದೆ.
ರಾಜ್ಯದಾದ್ಯಂತ ಪ್ರದರ್ಶನ ನೀಡುತ್ತಾ ಬಂದಿರುವ ನಂದಗೋಕುಲ ಡ್ಯಾನ್ಸ್ ಕಂಪೆನಿ ಈಗ ಸಂಸ್ಥೆಗೆ ಸೇರ್ಪಡೆಗೊಳ್ಳಲು ಕಲಾವಿದರಿಗೆ ಆಹ್ವಾನ ನೀಡಿದೆ.
ವೃತ್ತಿಪರ ಕಲಾವಿದೆಯರಿಗೆ ಸಂಸ್ಥೆ ಕೈ ಬೀಸಿ ಕರೆಯುತ್ತಿದ್ದು, ಅರ್ಹತೆಯ ಆಧಾರದ ಮೇಲೆ ಸಂಸ್ಥೆ ಆಯ್ಕೆ ಮಾಡಿಕೊಳ್ಳಲಿದೆ. ಆಸಕ್ತ ನೃತ್ಯ ಕಲಾವಿದರು ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ.
ಸಂಪರ್ಕ ಸಂಖ್ಯೆ : +91 95913 80997 | +919632794477 | +91 70192 90983




















