ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ನೀಡಿದ್ರೆ ಅದ್ಹೇಗೆ ಸೋಮಾರಿಗಳಾಗಿಬಿಡ್ತಾರೆ. ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಕೊಟ್ರೆ ಹೇಗೆ ಸೋಮಾರಿಗಳಾಗಿಬಿಡ್ತಾರೆ. ನಿಜಕ್ಕೂ ಮಹಿಳೆಯರ ಕೈಗೆ ಹಣ ಬರ್ತಿರೋದ್ರಿಂದ ಖರೀದಿ ಶಕ್ತಿ ಹೆಚ್ಚುತ್ತೆ, ದೇಶದ ಆರ್ಥಿಕತೆ ವೃದ್ಧಿಸುತ್ತೆ ಇದು ಹೇಗೆ ಸೋಮಾರಿತನ ಅಂತಾ ಸಿಎಂ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅವತ್ತು ಅಂಬೇಡ್ಕರ್ ಕೂಡಾ ಇದನ್ನೇ ಪ್ರತಿಪಾದಿಸಿದ್ದಾರೆ. ಸಮಾಜದಲ್ಲಿ, ಸಮಾನತೆ, ಆರ್ಥಿಕ ಸದೃಡತೆ ಬರ್ಬೇಕು ಅಂತಾ. ನಿಜಕ್ಕೂ ಅಂಬೇಡ್ಕರ್ ಓರ್ವ ಮೇಧಾವಿ, ಅವರ ಮಾತನ್ನ ಅಲ್ಲಗೆಳೆಯಲು ಆಗುತ್ತಾ ಅಂತಾ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.



















