ನಟ ಪುನೀತ್ ರಾಜ್‌ಕುಮಾರ್ ಅವರ ಹಿರಿಯ ಮಗಳು ಧೃತಿ, ಅಮೆರಿಕದ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಅಲ್ಲಿ ಪದವಿ ಪಡೆದಿದ್ದಾರೆ. 2021ರಲ್ಲಿ ಪ್ರವೇಶ ಪಡೆದಿದ್ದ ಅವರೀಗ ಪದವಿ ಪಡೆದಿದ್ದಾರೆ.

ಮಗಳು ಪದವಿ ಪಡೆಯುವ ಅಪರೂಪದ ಸಂದರ್ಭಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ವಂದಿತಾ ಪುನೀತ್ ರಾಜ್‌ಕುಮಾರ್ ಸಾಕ್ಷಿಯಾದರು. ವಿಶೇಷವೆಂದರೆ, ಮಗಳು ಪದವಿ ಪಡೆದು ಹೊರಗಡೆ ಬರುತ್ತಿದ್ದಂತೆ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಂಗ್ಯಾಜ್ಯುಲೇಶನ್ಸ್ ಎಂದು ಕೂಗುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.

ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್, ನ್ಯೂಯಾರ್ಕ್ ನಗರದ ದಿ ನ್ಯೂ ಸ್ಕೂಲ್‌ನ ಭಾಗವಾಗಿದ್ದು, ಯುನೈಟೆಡ್ ಸ್ಟೇಟ್ಸ್‌ನ ನಂಬರ್ ಒನ್ ಡಿಸೈನ್ ಸ್ಕೂಲ್ ಎಂದು QS ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ 2022ರಲ್ಲಿ 5 ವರ್ಷಗಳಿಂದ ಮನ್ನಣೆ ಪಡೆದಿದೆ. 1896 ರಲ್ಲಿ ವಿಲಿಯಂ ಮೆರಿಟ್ ಚೇಸ್ ಸ್ಥಾಪಿಸಿದ ಈ ಶಾಲೆ, 1941 ರಲ್ಲಿ ಫ್ರಾಂಕ್ ಅಲ್ವಾ ಪಾರ್ಸನ್ಸ್ ಹೆಸರಿನಲ್ಲಿ ಮರುನಾಮಕರಣ ಆಯ್ತು. ಕಲೆ, ವಿನ್ಯಾಸ, ಸಾಮಾಜಿಕ ನ್ಯಾಯ, ಸಮರ್ಥನೀಯತೆಯ ಮೇಲೆ ಕೇಂದ್ರೀರಣ ಆಗಿತ್ತು.

ಪಾರ್ಸನ್ಸ್ ಐದು ವಿಭಾಗಗಳಲ್ಲಿ ಸ್ನಾತಕೋತ್ತರ, ಸ್ನಾತಕ ಮತ್ತು ಸಹಾಯಕ ಪದವಿ ಕಾರ್ಯಕ್ರಮಗಳನ್ನು ನೀಡುತ್ತದೆ: ಕಲೆ, ಕಮ್ಯುನಿಕೇಷನ್ ಡಿಸೈನ್, ಫೋಟೋಗ್ರಾಫಿ, ವಾಸ್ತುಶಿಲ್ಪ, ಒಳಾಂಗಣ ವಿನ್ಯಾಸ, ವಿನ್ಯಾಸ ತಂತ್ರಗಳಿವೆ. ನ್ಯೂಯಾರ್ಕ್‌ನ ಗ್ರೀನ್‌ವಿಚ್ ವಿಲೇಜ್‌ನಲ್ಲಿ ಮುಖ್ಯ ಕ್ಯಾಂಪಸ್ ಇದ್ದು, 600 ಕಾರ್ಯಕ್ಷೇತ್ರಗಳ ಮೇಕಿಂಗ್ ಸೆಂಟರ್, 17 ಡ್ರಾಯಿಂಗ್ ಸ್ಟುಡಿಯೋಗಳು, ಮತ್ತು 2,000 ಕಲಾಕೃತಿಗಳ ಸಂಗ್ರಹವನ್ನು ಹೊಂದಿದೆ. ಪಾರ್ಸನ್ಸ್ ಪ್ಯಾರಿಸ್ 1921 ರಲ್ಲಿ ಸ್ಥಾಪನೆಯಾಯಿತು. ಇನ್ನು ಇಲ್ಲಿ ಪ್ರವೇಶ ಪಡೆದ್ರೆ ಬರೋಬ್ಬರಿ 39,03,475 ಪಾವತಿಸಬೇಕಿದೆ.



















