ವಿಜಯಪುರ: ಸಚಿವ ಕೃಷ್ಣಭೈರೇಗೌಡ ಅವರು ಬೆಂಗಳೂರುನಿಂದ ವಿಜಯಪುರಕ್ಕೆ ಬಸ್ ನಲ್ಲಿ ಆಗಮಿಸಿ ಸರಳತೆ ಮೆರೆದಿದ್ದಾರೆ. ಅವರ ಸರಳತೆ ಕಂಡು ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಲ್ಯಾಣ ರಥ ಬಸ್ ನಲ್ಲಿ ಸಚಿವರು ಬೆಂಗಳೂರಿನಲ್ಲಿ ವಿಜಯಪುರಕ್ಕೆ ಆಗಮಿಸಿದ್ದಾರೆ. ದಲಿತ ವಿದ್ಯಾರ್ಥಿ ಪರಿಷತ್ ಸೇರಿದಂತೆ ಇನ್ನಿತರ ಸಂಘಟನೆ ಕಾರ್ಯಕರ್ತರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಚಿವರು ಆಗಮಿಸಿದ್ದರು.
ಕಲ್ಯಾಣ ರಥ ಬಸ್ ಇಳಿಯುತ್ತಿದ್ದಂತೆ ಸಚಿವರಿಗೆ ಪುಸ್ತಕ ನೀಡಿ ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಈ ವೇಳೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರು ಹಾಗೂ ಅಧಿಕಾರಿಗಳು ಇದ್ದರು. ವಿದ್ಯಾರ್ಥಿಗಳು ಕೂಡ ಹಾಜರಿದ್ದರು.