ಬೆಂಗಳೂರು: ಎಕ್ಸ್ ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (Exim Bank Recruitment 2025) 28 ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಮ್ಯಾನೇಜ್ ಮೆಂಟ್ ಟ್ರೈನಿ, ಡೆಪ್ಯುಟಿ ಮ್ಯಾನೇಜರ್ (ಗ್ರೇಡ್ 1) ಹಾಗೂ ಚೀಫ್ ಮ್ಯಾನೇಜರ್ (ಗ್ರೇಡ್ 3) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿ ಸಲ್ಲಿಕೆಯ ದಿನಾಂಕವನ್ನು ಏಪ್ರಿಲ್ 25ಕ್ಕೆ ವಿಸ್ತರಣೆ ಮಾಡಲಾಗಿದೆ.
ಯಾವ ಹುದ್ದೆ ಎಷ್ಟು ಖಾಲಿ?
ಮ್ಯಾನೇಜ್ ಮೆಂಟ್ ಟ್ರೈನಿ- 22
ಡೆಪ್ಯುಟಿ ಮ್ಯಾನೇಜರ್ (ಗ್ರೇಡ್ 1) – 5
ಚೀಫ್ ಮ್ಯಾನೇಜರ್ (ಗ್ರೇಡ್ 3)- 1
ನೇಮಕಾತಿ ಹೇಗೆ?
ಅಭ್ಯರ್ಥಿಗಳು eximbankindia.inಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ, ನಂತರ ಪರೀಕ್ಷೆ ನಡೆಸಲಾಗುತ್ತದೆ. ಚೆನ್ನೈ, ಕೋಲ್ಕತ್ತ, ಮುಂಬೈ ಹಾಗೂ ದೆಹಲಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ನಂತರ ಸಂದರ್ಶನ ನಡೆಸಿ, ಪರೀಕ್ಷೆ ಹಾಗೂ ಸಂದರ್ಶನದ ಅಂಕಗಳನ್ನು ಆಧರಿಸಿ ನೇಮಕಾತಿ ಆದೇಶ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಜನರಲ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್ ಸಿ, ಎಸ್ ಟಿ, ಹೆಣ್ಣುಮಕ್ಕಳು ಹಾಗೂ ಇಡಬ್ಲ್ಯೂಎಸ್ ವರ್ಗದವರಿಗೆ 100 ರೂ. ಅರ್ಜಿ ಶುಲ್ಕವಿದೆ.
ಸಂಬಳ ಎಷ್ಟು?
ಡೆಪ್ಯುಟಿ ಮ್ಯಾನೇಜರ್ ಹಾಗೂ ಚೀಫ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ 48,480 ರೂಪಾಯಿಯಿಂದ 1.05 ಲಕ್ಷ ರೂಪಾಯಿವರೆಗೆ ವೇತನ ನೀಡಲಾಗುತ್ತದೆ. ಮ್ಯಾನೇಜ್ ಮೆಂಟ್ ಟ್ರೈನಿ ಹುದ್ದೆಗಳಿಗೆ ನೇಮಕಾತಿ ಹೊಂದಿದವರಿಗೆ ಮಾಸಿಕ 65 ಸಾವಿರ ರೂಪಾಯಿವರೆಗೆ ಸ್ಟೈಪೆಂಡ್ ನೀಡಲಾಗುತ್ತದೆ.