ಬೆಂಗಳೂರು | ನಿರುದ್ಯೋಗಿ ಯುವಕ-ಯುವತಿಯರಿಗೆ ಸುವರ್ಣಾವಕಾಶ ಕೂಡಿಬಂದಿದೆ. ಹೌದು.. ಬೆಂಗಳೂರಿನ ನೆಲಮಂಗಲದ ಅರಿಶಿನಕುಂಟೆಯಲ್ಲಿರುವ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ರುಡ್ ಸೆಟ್ ಸಂಸ್ಥೆಯಲ್ಲಿ ದಿನಾಂಕ 08-04-2026ರಿಂದ 31 ದಿನಗಳ ಎಂಬ್ರಾಹಿಡರಿ ಮತ್ತು ಫ್ಯಾಬ್ರಿಕ್ ಪೈಂಟಿಂಗ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿ ಸಮಯದಲ್ಲಿ ಉಚಿತ ಊಟ, ವಸತಿ, ಸಮವಸ್ತ್ರ ಹಾಗೂ ಸರ್ಟಿಫಿಕೇಟ್ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತರಬೇತಿಯಲ್ಲಿ ಕೌಶಲ್ಯಾದಾರಿತ ತರಬೇತಿಯ ಜೊತೆಗೆ ವ್ಯಕ್ತಿತ್ವ ವಿಕಸನ ಹಾಗೂ ಉದ್ಯಮಶೀಲತಾ ಅಭಿವೃದ್ದಿ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿ ನಂತರ ಸ್ವ-ಉದ್ಯೋಗ ಪ್ರಾರಂಭಿಸಲು ಮಾರ್ಗದರ್ಶನವನ್ನು ಸಂಸ್ಥೆ ನೀಡಲಿದೆ.
ಆಸಕ್ತರು ಕೂಡಲೇ ಈ ದೂರವಾಣಿಗೆ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಿ. 9241482541, 9740982585 ಹಾಗೂ 9113880324
ಇದನ್ನೂ ಓದಿ : ಇರಾನ್ನಲ್ಲಿ ಚಿಕ್ಕಮಗಳೂರಿನ ಯುವಕ ನಾಪತ್ತೆ.. ಪೋಷಕರು ಕಂಗಾಲು!



















