ಬೆಂಗಳೂರು: ಕೇಂದ್ರ ಸರ್ಕಾರದ ಹುದ್ದೆಗಳನ್ನು ಹುಡುಕುತ್ತಿರುವವರಿಗೆ ಶುಭ ಸಮಾಚಾರ ದೊರೆತಿದೆ. ದೇಶದ ಕರಾವಳಿ ರಕ್ಷಣಾ ಪಡೆಯು (Indian Coast Guard Recruitment 2025) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. 9 ಮೋಟರ್ ಟ್ರಾನ್ಸ್‌ಪೋರ್ಟ್ ಡ್ರೈವರ್, ಲ್ಯಾಸ್ಕರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆಗೆ ನವೆಂಬರ್ 11 ಕೊನೆಯ ದಿನವಾಗಿದೆ.
“ಹುದ್ದೆಗಳ ವಿವರ”
ನೇಮಕಾತಿ ಸಂಸ್ಥೆ: ಕರಾವಳಿ ರಕ್ಷಣಾ ಪಡೆ
ಹುದ್ದೆಗಳ ಹೆಸರು: ಮೋಟರ್ ಟ್ರಾನ್ಸ್ ಪೋರ್ಟ್ ಡ್ರೈವರ್, ಲ್ಯಾಸ್ಕರ್
ಒಟ್ಟು ಹುದ್ದೆಗಳು: 09
ಉದ್ಯೋಗ ಸ್ಥಳ: ಅಂಡಮಾನ್-ನಿಕೋಬಾರ್
ಅರ್ಜಿ ಸಲ್ಲಿಕೆ ವಿಧಾನ: ಆಫ್‌ಲೈನ್
ಮಾನ್ಯತೆ ಪಡೆದ ಯಾವುದೇ ಮಂಡಳಿಗಳಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದವರು ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿದ್ದಾರೆ. ಕನಿಷ್ಠ 18 ರಿಂದ 27 ವರ್ಷದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿರುವುದಿಲ್ಲ. ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲಿಗೆ joinindiancoastguard.cdac.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿಕೊಂಡು, ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
“ಅರ್ಜಿ ಸಲ್ಲಿಸಬೇಕಾದ ವಿಳಾಸ”
Commander, Coast Guard Region (A&N), Post Box No.716, Haddo (PO), Sri Vijaya Puram-744102, A&N Islands
“ಶಾನ್ ಮಸೂದ್, ಭಾರತದ ನಾಯಕ” : ಕಾಮೆಂಟರಿ ವೇಳೆ ದಕ್ಷಿಣ ಆಫ್ರಿಕಾದ ದಿಗ್ಗಜ ಶಾನ್ ಪೊಲಾಕ್ ಅವರಿಂದ ಮಹಾ ಪ್ರಮಾದ!