ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಸೂಪರಿಂಟೆಂಡೆಂಟ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಅಧಿಕೃತ ವೆಬ್ಸೈಟ್ನಲ್ಲಿ 212 ಸೂಪರಿಂಟೆಂಡೆಂಟ್ ಮತ್ತು ಜೂನಿಯರ್ ಅಸಿಸ್ಟೆಂಟ್ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಪ್ರಕ್ರಿಯೆ ಜ. 2ರಿಂದ ಆರಂಭವಾಗುತ್ತದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಜ. 31 ಕೊನೆಯ ದಿನವಾಗಿದೆ. 212 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಪೈಕಿ 142 ಹುದ್ದೆಗಳು ಸೂಪರಿಂಟೆಂಡೆಂಟ್ ಮತ್ತು 70 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅಧಿಕೃತ ವೆಬ್ಸೈಟ್: https://www.cbse.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸೂಪರಿಂಟೆಂಡಂಟ್ (ಪೇ ಲೆವೆಲ್ 6) ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ಅಲ್ಲದೇ, 3 ವರ್ಷ ಕಾರ್ಯಾನುಭವ ಹೊಂದಿರಬೇಕು. ಜೂನಿಯರ್ ಅಸಿಸ್ಟಂಟ್ (ಪೇ ಲೆವೆಲ್ 2) ಹುದ್ದೆಗೆ ದ್ವಿತೀಯ ಪಿಯುಸಿ ಪಾಸಾಗಿರಬೇಕು. ಟೈಪಿಂಗ್ ಸ್ಕಿಲ್ ಹೊಂದಿರಬೇಕು.