ಎಸ್ ಬಿಐ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಎಸ್ ಬಿಐನ ಅಧಿಕೃತ ವೆಬ್ ಸೈಟ್ sbi.co.in ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. 150 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ನೋಂದಣಿ ಪ್ರಕ್ರಿಯೆಯು ಜನವರಿ 3 ರಿಂದ ಪ್ರಾರಂಭವಾಗಿದ್ದು, ಜನವರಿ 23ರ ವರೆಗೆ ನಡೆಯಲಿದೆ. ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ಇಲ್ಲಿ ಒದಗಿಸಲಾಗಿದೆ.
ಪೋಸ್ಟ್ ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು ಮತ್ತು IIBF ನಿಂದ ಫಾರೆಕ್ಸ್ ನಲ್ಲಿ ಪ್ರಮಾಣ ಪತ್ರ ಪೂರ್ಣಗೊಳಿಸಿರಬೇಕು. ಆಯ್ಕೆ ಪ್ರಕ್ರಿಯೆಯು ಶಾರ್ಟ್‌ಲಿಸ್ಟ್ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಸಂದರ್ಶನವು 100 ಅಂಕಗಳನ್ನು ಹೊಂದಿರುತ್ತದೆ. ಸಂದರ್ಶನದಲ್ಲಿ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ. ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.