ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಅನುಷಾ ರೈ ಅದ್ದೂರಿಯಾಗಿ ತನ್ನ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಗೆ ಹೋದ ಬಳಿಕ ತನ್ನ ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿರುವ ಅನುಷಾ ರೈ ಈಗ ಹಲವು ಸೆಲೆಬ್ರಿಟಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳ ಜೊತೆ ಅನುಷಾ ರೈ ಖುಷಿಯ ದಿನ ಕಳೆದಿದ್ದಾರೆ. ಹುಟ್ಟು ಹಬ್ಬಕ್ಕೆ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತು ಲಮಾಣಿ, ಧನರಾಜ್ ಆಚಾರ್, ಭವ್ಯ ಗೌಡ, ಗೋಲ್ಡ್ ಸುರೇಶ್, ರಂಜಿತ್ ಹಾಗೂ ನಟಿ ಪ್ರಿಯಾಂಕ ಉಪೇಂದ್ರ ಕೂಡ ಭಾಗಿಯಾಗಿದ್ದರು.
ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಧರ್ಮ ಕೀರ್ತಿರಾಜ್ ಜೊತೆ ಟ್ರೋಲ್ ಆಗಿದ್ದ ಇವರು ಬಿಗ್ ಬಾಸ್ ನಿಂದ ಆಚೆ ಬಂದ ಬಳಿಕ ಇನ್ನಷ್ಟು ಜನಪ್ರಿಯತೆ ಗಳಿಸಿದ್ದಾರೆ.