ಕೊಲಂಬೊ: ಶ್ರೀಲಂಕಾದ ಸಂಸತ್ ಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ್ ದಿಸ್ಸಾನಾಯಕೆ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ ಪಾರ್ಟಿ (ಎನ್‌ಪಿಪಿ) ಬಹುಮತ ಪಡೆದಿದೆ. ಹೀಗಾಗಿ ಮತ್ತೊಮ್ಮೆ ಅಧಿಕಾರ ನಡೆಸಲು ಅನುರಾ ಕುಮಾರ್ ಮುಂದಾಗಿದ್ದಾರೆ.
ಮಾಜಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಬೆಂಬಲಿತ ಪ್ರಮುಖ ವಿರೋಧ ಪಕ್ಷ ಸಮಗಿ ಜನ ಬಲವೇಗಯ (ಎಸ್‌ಜೆಬಿ) ಶೇ. 11ರಷ್ಟು ಹಾಗೂ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ (ಎನ್‌ಡಿಎಫ್) ಶೇ. 5ರಷ್ಟು ಮತ ಪಡೆದಿವೆ. NPP ದಕ್ಷಿಣ ಪ್ರಾಂತ್ಯದ ರಾಜಧಾನಿ ಗಾಲೆಯಲ್ಲಿ ಶೇ. 70ಕ್ಕಿಂತಲೂ ಅಧಿಕ ಮತಗಳನ್ನು ಪಡೆದು ಗೆದ್ದು ಬೀಗಿದೆ.
ಶ್ರೀಲಂಕಾದಲ್ಲಿ 17 ಮಿಲಿಯನ್ ಗಿಂತ ಹೆಚ್ಚು ಮತದಾರರಿದ್ದು, ಶೇ. 65ರಷ್ಟು ಮತದಾನವಾಗಿತ್ತು. ಶ್ರೀಲಂಕಾ ಸಂಸತ್ತಿನಲ್ಲಿ 225 ಸ್ಥಾನಗಳಿವೆ ಮತ್ತು ಬಹುಮತಕ್ಕೆ 113 ಸ್ಥಾನಗಳನ್ನು ಗೆಲ್ಲುವುದು ಅವಶ್ಯಕ. 5 ವರ್ಷಗಳ ಅಧಿಕಾರವಧಿ ಇರಲಿದೆ. 2022 ರ ಆರ್ಥಿಕ ಬಿಕ್ಕಟ್ಟಿನ ನಂತರ, ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಸಂಸತ್ತಿನ ಚುನಾವಣೆಗಳು ನಡೆದಿವೆ.