ಹಾಸನ: ಚನ್ನರಾಯಪಟ್ಟಣದ ತಹಶೀಲ್ದಾರ್ ವಜಾಕ್ಕೆ ಆಗ್ರಹಿಸಿ ಹೋರಾಟ ತೀವ್ರಗೊಂಡಿದೆ. ಇವತ್ತು ಹೋರಾಟಗಾರರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಸಿದ್ದರು ಆ ವೇಳೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಜಟಾಪಟಿ ಶುರುವಾಗಿ ಹೋರಾಟಗಾರರನ್ನು ಬಂಧಿಸಿದ್ದಾರೆ.
ಈ ಹಿಂದೆ ತಹಶೀಲ್ದಾರ್ ವಿರುದ್ದ ಭ್ರಷ್ಟಚಾರ ಹಾಗೂ ಸರ್ಕಾರದ ವಿರುದ್ಧ ಅಶ್ಲೀಲ ಪದಬಳಕೆಯ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿಯಿಂದ ಕಳೆದ 13 ದಿನಗಳಿಂದ ತಹಶಿಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೋರಾಟ ನಡೆಸಲಾಗಿತ್ತು.