ಬೆಂಗಳೂರು: ಮಾಜಿ ಸಚಿವ ರೇವಣ್ಣ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಒಂದರ ಮೇಲೊಂದು ಕಾನೂನು ಸಂಕಷ್ಟಗಳು ತಲೆದೋರುತ್ತಿವೆ. ಅತ್ಯಾಚಾರ ಪ್ರಕರಣದಲ್ಲಿ ಎಸ್ಐಟಿ ವಿಧಿಸಿದ್ದ ಪ್ರಜ್ವಲ್ ರೇವಣ್ಣಗೆ (Prajwal Revanna) ಕೋರ್ಟ್ ಜುಲೈ 8ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇನ್ನೊಂದೆ ಸಲಿಂಗ ಕಾಮ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಸೂರಜ್ ರೇವಣ್ಣ (Suraj Revanna) ಕೂಡ ಅಲ್ಲೇ ಇದ್ದಾರೆ.
ತಂದೆ ರೇವಣ್ಣ ಜಾಮೀನಿನ ಮೇಲೆ ಇದೇ ಜೈಲಿನಿಂದ ಹೊರಗೆ ಬಂದಿದ್ದು, ಪುತ್ರರಾದ ಸೂರಜ್ ಮತ್ತು ಪ್ರಜ್ವಲ್ ಒಂದೇ ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದ ಕ್ವಾರಂಟೈನ್ ಬೇರೆ ಬೇರೆ ಬ್ಯಾರಕ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಜುಲೈ 8ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ಪ್ರಜ್ವಲ್ ನನ್ನು ಪೊಲೀಸರು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಕಳುಹಿಸಿದ್ದಾರೆ. ಇನ್ನೊಂದೆಡೆ ಕೋರ್ಟ್ ಸೂರಜ್ ರೇವಣ್ಣನನ್ನು ಸಿಐಡಿ ಕಸ್ಟಡಿಗೆ ನೀಡಿದೆ. ಹೀಗಾಗಿ ಸೂರಜ್ ನನ್ನು ಕಸ್ಟಡಿಗೆ ಕರೆಯ್ಯಲಾಗುತ್ತದೆ. ಹೀಗಾಗಿ ಪ್ರಜ್ವಲ್ ಒಬ್ಬರೇ ಪರಪ್ಪನ ಅಗ್ರಹಾರದಲ್ಲಿ ಇರಬೇಕಾಗಿದೆ. ದರ್ಶನ್ ಕೂಡ ಇದೇ ಜೈಲಿನಲ್ಲಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ್ದಾರೆ ಎಂಬ ಪ್ರಕರಣದಲ್ಲಿ ಎಚ್.ಡಿ ರೇವಣ್ಣ ಬಂಧನಕ್ಕೆ ಒಳಗಾಗಿದ್ದರು. ಭವಾನಿ ರೇವಣ್ಣ (Bhavani Revanna) ಅವರಿಗೂ ಎಸ್‌ಐಟಿ ನೋಟಿಸ್ ಕೊಟ್ಟು ಬಂಧನಕ್ಕೆ ಮುಂದಾಗಿತ್ತು. ಅಷ್ಟರಲ್ಲಿ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಹೀಗಾಗಿ ಭವಾನಿ ಅವರು ಬಂಧನದಿಂದ ಪಾರಾಗಿದ್ದಾರೆ.