ಬೆಂಗಳೂರು: ಬ್ರ್ಯಾಂಡ್ ಬೆಂಗಳೂರಿನ ಕನಸ್ಸಿಗೆ ಮತ್ತೊಂದು ರೆಕ್ಕೆ ಬಂದಂತಾಗಿದೆ. 250 ಮೀಟರ್ ಎತ್ತರದ ಸ್ಕೈ ಡೈಕ್ ನಿರ್ಮಾಣದ ಕನಸಿಗೆ ಪದೇ ಪದೇ ಹಿನ್ನೆಡೆಯಾಗುತ್ತಿದ್ದು, ಈಗ ಅದಕ್ಕಾಗಿ ಮತ್ತೊಂದು ಜಾಗ ಗುರುತಿಸಲಾಗಿದೆ.
ಬೆಂಗಳೂರಿನ ಹೆಮ್ಮಿಗೆಪುರ ಬಳಿ ಸ್ಕೈ ಡೆಕ್ ನಿರ್ಮಾಣಕ್ಕೆ ಸ್ಥಳೀಯರು ವಿರೋಧಿಸಿದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅಲ್ಲಿ ಸ್ಕೈ ಡೈಕ್ ನಿರ್ಮಾಣಕ್ಕೆ ಬೇಡ ಅಂತಾ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಪಾಲಿಕೆಯು ಮತ್ತೊಂದು ಜಾಗವನ್ನು ಹುಡುಕಿದೆ.
ನಗರದ ಅರ್. ಅರ್ ನಗರದ ಬಳಿ ಇರುವ ಬೆಂಗಳೂರು ವಿಶ್ವವಿದ್ಯಾಲಯದದಲ್ಲಿ ಜಾಗ ಹುಡುಕಲಾಗಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಅಲ್ಲದೇ, ಇದರ ನಿರ್ಮಾಣದೊಂದಿಗೆ ಪ್ರವಾಸೋದ್ಯಮ ಉತ್ತೇಜಿಸುವ ಕುರಿತು ಕೂಡ ಚಿಂತನೆ ನಡೆಸಲಾಗಿದೆ. ಈ ನಿರ್ಧಾರಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದೇಶದ ಅತಿ ಎತ್ತರದ ಗೋಪುರ ತಲೆ ಎತ್ತಲಿದೆ.