ಬೆಂಗಳೂರು: ಬೆಂಗಳೂರು ಏರ್ ಪೋರ್ಟ್ ಗೆ ಮತ್ತೆ ಎರಡು ಗರಿ ಬಂದಿವೆ.
ಟ್ರಾವೆಲ್ ಹಾಗೂ ಲೀಶರ್ ಇಂಡಿಯಾ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ‘ಅತ್ಯುತ್ತಮ ದೇಶೀಯ ಏರ್‌ಪೋರ್ಟ್ ಲಾಂಜ್’ ಮನ್ನಣೆ ಸಿಕ್ಕಿದೆ. ಅಲ್ಲದೇ, ಕಾಂಡೆ ನಾಸ್ಟ್ ರೀಡರ್ಸ್ ಚಾಯ್ಸ್ ಅವಾರ್ಡ್ಸ್ -2024 ನಲ್ಲಿ ಟರ್ಮಿನಲ್ 2 ನಲ್ಲಿನ ಅಂತಾರಾಷ್ಟ್ರೀಯ ನಿರ್ಗಮನ ಪ್ರದೇಶದಲ್ಲಿರುವ 080 ಲಾಂಜ್‌ಗೆ ‘ಮೆಚ್ಚಿನ ವಿಮಾನ ನಿಲ್ದಾಣ ಲಾಂಜ್’ ಎಂಬ ಶೀರ್ಷಿಕೆಯ ಮನ್ನಣೆ ನೀಡಲಾಗಿದೆ.
ಪ್ರತಿಷ್ಠಿತ ಟ್ರಾವೆಲ್ ಪ್ಲಸ್ ಲೀಶರ್ ಮತ್ತು ಕಾಂಡೆ ನಾಸ್ಟ್ ಟ್ರಾವೆಲರ್ ನಿಯತಕಾಲಿಕೆಗಳು ಪ್ರಯಾಣ ಮತ್ತು ಆತಿಥ್ಯ ಉದ್ಯಮದ ಅತ್ಯುತ್ತಮ ಸಂಸ್ಥೆಗಳನ್ನು ಓದುಗರ ಆಯ್ಕೆಯ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡುತ್ತವೆ. ಈ ಪುರಸ್ಕಾರಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 080 ಲಾಂಜ್ ಗೆ ಲಭಿಸಿದೆ. ಈ ಮೂಲಕ ಪ್ರಯಾಣಿಕರು ಹೊಂದಿರುವ ನಂಬಿಕೆ ಮತ್ತು ಮೆಚ್ಚುಗೆಯನ್ನು ಕೆಂಪೇಗೌಡ ವಿಮಾನ ನಿಲ್ದಾಣ ಗಳಿಸಿದೆ.
ಟರ್ಮಿನಲ್ 2 ಆರಂಭಗೊಂಡ ನಂತರ ನೀಡುತ್ತಿರುವ ಸೇವೆಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿಗಳ ಮನ್ನಣೆ ದೊರೆಯುತ್ತಾ ಬಂದಿದ್ದು, ಇದು ವಿಮಾನ ನಿಲ್ದಾಣದ ಸೇವಾ ಉತ್ಕೃಷ್ಟತೆಯ ಬದ್ಧತೆ ಎತ್ತಿ ತೋರಿಸಿದೆ.