ಢಾಕಾ : ಕ್ರಿಕೆಟ್ ಲೋಕದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಮೈದಾನದಲ್ಲೇ ತಂಡವೊಂದರ ಕೋಚ್ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.
ಹೌದು.. ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಈ ಘಟನೆ ನಡೆದಿದ್ದು, ಬಿಪಿಎಲ್ (ಬಾಂಗ್ಲಾದೇಶ ಪ್ರೀಮಿಯರ್ ಲೀಗ್) ಪಂದ್ಯದ ವೇಳೆ ಢಾಕಾ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಮಹಬೂಬ್ ಅಲಿ ಜಾಕಿ ಹೃದಯಾಘಾತದಿಂದ ಮೈದಾನದಲ್ಲಿ ನಿಧನರಾಗಿದ್ದಾರೆ.
ಢಾಕಾ ಕ್ಯಾಪಿಟಲ್ಸ್ vs ರಾಜ್‌ಶಾಹಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಈ ದುರಂತ ಸಂಭವಿಸಿದ್ದು, ಪಂದ್ಯ ಪ್ರಾರಂಭವಾಗುವ ಮೊದಲು ಜಾಕಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ವೈದ್ಯಕೀಯ ತಂಡವು ಅವರಿಗೆ ಸಿಪಿಆರ್ ನೀಡಿದೆ. ಆ ಬಳಿಕ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಅವರನ್ನು ಪರೀಕ್ಷಿಸಿ ಐಸಿಯುಗೆ ದಾಖಲಿಸಿದರು, ಅಲ್ಲಿ ಅವರು ಸ್ವಲ್ಪ ಸಮಯದ ನಂತರ ನಿಧನರಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಫ್ರಾಂಚೈಸಿ, ‘ಢಾಕಾ ಕ್ಯಾಪಿಟಲ್ಸ್‌ನ ಸಹಾಯಕ ಕೋಚ್ ಮಹಬೂಬ್ ಅಲಿ ಝಾಕಿ ಅಭ್ಯಾಸದ ಸಮಯದಲ್ಲಿ ಅಸ್ವಸ್ಥರಾದರು ಮತ್ತು ಮೈದಾನದಲ್ಲಿ ಕುಸಿದು ಬಿದ್ದರು. ಅವರನ್ನು ತಕ್ಷಣವೇ ಸಿಪಿಆರ್ ನೀಡಿ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮೈಸೂರು ಸಿಲಿಂಡರ್ ಸ್ಫೋಟ ಪ್ರಕರಣ | ಮೃತರಿಗೆ ತಲಾ 50 ಲಕ್ಷ ರೂ. ಪರಿಹಾರ ಕೊಡಿ – ವಾಟಾಳ್ ನಾಗರಾಜ್ ಆಗ್ರಹ



















