ಬೀಜಿಂಗ್: ಇಡೀ ಜಗತ್ತಿಗೆ ಕೊರೊನಾ ವೈರಸ್ ಕೊಡುಗೆ ನೀಡಿ, ವಿಶ್ವದ ಲಾಕ್ ಡೌನ್ ಗೆ ಕಾರಣವಾಗಿದ್ದ ಚೀನಾದಿಂದ ಮತ್ತೊಂದು ವೈರಸ್ ಹೊರ ಬಂದಿದೆ ಎನ್ನಲಾಗಿದೆ.
ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಸೇರಿದಂತೆ ಕೆಲವು ಹೊಸ ವೈರಸ್ ಚೀನಾದಲ್ಲಿ ಸೃಷ್ಟಿಯಾಗಿವೆ ಎನ್ನಲಾಗಿದೆ. ಈ ವೈರಸ್ ಕೂಡ ಕೊರೊನಾ ವೈರಸ್ ನಂತೆ ಸಾಂಕ್ರಾಮಿಕವಾಗಿ ಹರಡುತ್ತದೆ ಎನ್ನಲಾಗಿದೆ. ಇದನ್ನು ಗಮನಿಸಿದರೆ ಮತ್ತೊಮ್ಮೆ ಜಗತ್ತಿನಲ್ಲಿ ಹೆಲ್ತ್ ಎಮರ್ಜೆನ್ಸಿ ಸೃಷ್ಟಿಯಾಗಲಿದೆ ಎಂಬ ಭಯ ಸೃಷ್ಟಿಯಾಗುತ್ತಿದೆ.
ಅಲ್ಲದೇ, ಚೀನಾದಲ್ಲಿ ರೋಗಿಗಳಿಂದ ಆಸ್ಪತ್ರೆಗಳೆಲ್ಲ ತುಂಬಿವೆ ಎಂಬ ಪೋಸ್ಟ್ ಕೂಡ ಹರಿದಾಡುತ್ತಿದೆ. ಈ ಪೋಸ್ಟ್ ಗಳಿಗೆ ಯಾವುದೇ ಆಧಾರವಿಲ್ಲ. ಈ ಹೊಸ ವೈರಸ್ ಬಗ್ಗೆ ಚೀನಾ ಯಾವುದೇ ಸ್ಪಷ್ಟನೆ ನೀಡಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಮಾತನಾಡಿಲ್ಲ..ಆದರೆ, ವೈದ್ಯಕೀಯ ತುರ್ತು ಪರಿಸ್ಥಿತಿಯ ಕುರಿತು ಸಾಮಾಜಿಕ ಮಾಧ್ಯಮದ ಊಹಾಪೋಹಗಳು ಹುಟ್ಟಿಕೊಂಡಿವೆ.