ಅಮೆರಿಕದಲ್ಲಿ ಮತ್ತೊಂದು ಹಿಂದೂ ದೇವಸ್ಥಾನದ ಮೇಲೆ ದಾಳಿ ನಡೆದಿರುವ ಕುರಿತು ವರದಿಯಾಗಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿನ BAPS ಸ್ವಾಮಿನಾರಾಯಣ ಮಂದಿರವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆಂದು ತಿಳಿದು ಬಂದಿದೆ.
ಈ ಘಟನೆ ಬುಧವಾರ ರಾತ್ರಿ ನಡೆದಿದೆ. ನ್ಯೂಯಾರ್ಕ್ ನಲ್ಲಿ ಇತ್ತೀಚೆಗಷ್ಟೇ ಹಿಂದೂ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು. ಈಗ ಅಂತಹುದೇ ಘಟನೆ ಮರುಕಳಿಸಿದೆ.
ಧ್ವಂಸ ಮಾಡಿರುವ ದುಷ್ಕರ್ಮಿಗಳು ಗೋಡೆಯ ಮೇಲೆ ಹಿಂದೂ ವಿರೋಧಿ ಬರಹಗಳನ್ನು ಬರೆದಿದ್ದಾರೆ. ಇತ್ತೀಚೆಗಷ್ಟೇ ಖಲಿಸ್ತಾನ್ ಉಗ್ರ ಗುರುಪಂತ್ವ ಸಿಂಗ್ ಪನ್ನು ಹಿಂದೂ ದೇವಾಲಯ ಹಾಗೂ ಸಂಸ್ಥೆಗಳಿಗೆ ಇರುವ ಬೆದರಿಕೆಯ ವಿಡಿಯೋಗಳನ್ನು ಹಂಚಿಕೊಂಡಿದ್ದ. ಆನಂತರ ಈ ರೀತಿಯ ದಾಳಿಗಳು ನಡೆಯುತ್ತಿವೆ.
ನ್ಯೂಯಾರ್ಕ್ ನಲ್ಲಿ ಸ್ವಾಮಿ ನಾರಾಯಣ ದೇವಾಲಯದ ಮೇಲೆ ನಡೆದ ದಾಳಿಯೂ ಕ್ಯಾಲಿಫೋರ್ನಿಯಾ ಹಾಗೂ ಕೆನಡಾದ ಮಾದರಿಯಲ್ಲೇ ನಡೆದಿದೆ. ಇದರ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡವಿರುವ ಸಾಧ್ಯತೆ ಇರಬಹುದು ಎಂದು ಶಂಕಿಸಲಾಗಿದೆ. ಈ ರೀತಿಯ ದಾಳಿಗಳು ಅಲ್ಲಿನ ಹಿಂದೂಗಳ ಆತಂಕಕ್ಕೆ ಕಾರಣವಾಗುತ್ತಿದೆ.