ಬೆಂಗಳೂರು: ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರ ಮತ್ತೆ ಶಾಕ್ ನೀಡಲು ಮುಂದಾಗಿದೆ. ಮದ್ಯದ ದರವನ್ನು ಏರಿಕೆ ಮಾಡಲು ಅಬಕಾರಿ ಇಲಾಖೆ ಮುಂದಾಗಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.
2024-25ನೇ ಸಾಲಿನ ಬಜೆಟ್ ನಲ್ಲಿ ರಾಜ್ಯ ಸರ್ಕಾರವು ಅಬಕಾರಿ ಇಲಾಖೆಗೆ 38 ಸಾವಿರದ 500 ಕೋಟಿ ರೂಪಾಯಿ ಟಾರ್ಗೆಟ್ ನೀಡಿತ್ತು. ಆದರೆ, ಈ ಬಾರಿಯ ಬಜೆಟ್ ನಲ್ಲಿ 40 ಸಾವಿರ ಕೋಟಿ ರೂ. ಟಾರ್ಗೆಟ್ ನೀಡಲಾಗಿದೆ. ಈಗಾಗಲೇ ಐಎಂಎಲ್ ಮೇಲಿನ ದರ ಹೆಚ್ಚಳಕ್ಕೆ ಅಬಕಾರಿ ಇಲಾಖೆ ಸಿದ್ಧತೆ ನಡೆಸಿದೆ.
ಕಡಿಮೆ ದರ ಇರುವ ವಿಸ್ಕಿ, ಬ್ರ್ಯಾಂಡಿ, ರಮ್ ಹಾಗೂ ಜಿನ್ ದರ ಏರಿಕೆ ಮಾಡಲು ಅಬಕಾರಿ ಇಲಾಖೆ ಮುಂದಾಗಿದೆ. 5 ರಿಂದ 20 ರೂ. ವರೆಗೆ ಹೆಚ್ಚಳ ಮಾಡಿದರೆ, 80 ರೂ. ದರ ಇರುವ ಮದ್ಯ 100 ರೂ.ಗೆ ಏರಿಕೆಯಾಗಲಿದೆ. 90 ರೂ. ಇರುವ ದರ 110 ರೂ, 100 ರೂ. ಇರುವ ದರ 120 ರೂ.ಗೆ ಏರಿಕೆಯಾಗಲಿದೆ. ಆದರೆ, ಈ ಸುದ್ದಿ ಕೇಳಿ ಮದ್ಯ ಪ್ರಿಯರು ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.