ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಮಧ್ಯಮ ವರ್ಗದ ಜನರಿಗೆ ಚಿನ್ನದ ಆಭರಣಗಳು ಕೈಗೆಟುಕದಂತಾಗಿದೆ. ಚಿನ್ನದ ಬೆಲೆಯು ಇಂದು ಹೊಸ ಮೈಲಿಗಲ್ಲು ಮುಟ್ಟಿದ್ದು, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಿ ಗ್ರಾಮ್‌ಗೆ 14,000 ರೂಪಾಯಿಗಳ ಗಡಿಯನ್ನು ದಾಟಿದೆ. ನಿನ್ನೆಗಿಂತ ಇಂದು ಬೆಲೆಯಲ್ಲಿ ಭಾರಿ ಏರಿಕೆ ಕಂಡಿರುವುದು ಆಭರಣ ಪ್ರಿಯರಲ್ಲಿ ಆತಂಕ ಮೂಡಿಸಿದೆ.
ಇಂದಿನ ಬೆಲೆ:
- ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ: ಇಂದಿನ ದರ ಹೇಗಿದೆ ಇಲ್ಲಿದೆ ನೋಡಿ
- 2026ಕ್ಕೆ ಚಿನ್ನ ಕನಸಲ್ಲೂ ಕೈಗೆಟುಕದ್ದಾಗುತ್ತಾ? ವರ್ಲ್ಡ್ ಗೋಲ್ಡ್ ಕೌನ್ಸಿಲ್ CEO ಲೆಕ್ಕಾಚಾರಕ್ಕೆ ಶಾಕ್ ಆದ ಜನರು..!
- ಬಂಗಾರದ ಬೆಲೆ ಭಾರಿ ಏರಿಕೆ: 1.50 ಲಕ್ಷದತ್ತ ಸಾಗಿದ ಚಿನ್ನದ ದರ
- ಬೆಂಗಳೂರಿನಲ್ಲಿ ₹1.35 ಲಕ್ಷ ದಾಟಿದ ಚಿನ್ನ: ಬೆಳ್ಳಿ ಬೆಲೆಯಲ್ಲಿ ಹೊಸ ದಾಖಲೆ!
ಕಳೆದ ಎರಡು ದಿನಗಳಿಂದ ಸ್ಥಿರವಾಗಿ ಏರುತ್ತಿದ್ದ ಚಿನ್ನದ ದರವು ಇಂದು ಒಂದೇ ದಿನದಲ್ಲಿ ಪ್ರತಿ ಗ್ರಾಮ್‌ಗೆ 70 ರೂಪಾಯಿಗಳಷ್ಟು ದುಬಾರಿಯಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ 10 ಗ್ರಾಮ್‌ನ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 1,27,650 ರೂಪಾಯಿ ತಲುಪಿದ್ದರೆ, 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 1,39,250 ರೂಪಾಯಿ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ ಸಹ 10,500 ರೂಪಾಯಿಗಳ ಗಡಿ ದಾಟಿದೆ.
ಬೆಳ್ಳಿ ಬೆಲೆಯಲ್ಲಿಯೂ ದಿಢೀರ್ ಏರಿಕೆ:
ಚಿನ್ನದ ಜೊತೆಗೆ ಬೆಳ್ಳಿಯೂ ತನ್ನ ಹೊಳಪನ್ನು ಹೆಚ್ಚಿಸಿಕೊಂಡಿದೆ. ಚಿನ್ನಕ್ಕಿಂತ ಬೆಳ್ಳಿಯೂ ಸಹ ಬೆಲೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಗ್ರಾಮ್ ಬೆಳ್ಳಿ ಬೆಲೆ 240 ರೂಪಾಯಿ ಮುಟ್ಟಿದೆ. ಇನ್ನು ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳಲ್ಲಿ ಬೆಳ್ಳಿ ಬೆಲೆ ಪ್ರತಿ 100 ಗ್ರಾಮ್‌ಗೆ 24,500 ರೂಪಾಯಿಗಳವರೆಗೆ ಇದೆ. ಕೈಗಾರಿಕಾ ಬೇಡಿಕೆ ಮತ್ತು ಜಾಗತಿಕ ಮಾರುಕಟ್ಟೆಯ ಏರಿಳಿತಗಳು ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ (1 ಗ್ರಾಮ್ 22 ಕ್ಯಾರಟ್):
- ಬೆಂಗಳೂರು: 12,835 ರೂ.
- ಚೆನ್ನೈ: 12,890 ರೂ.
- ದೆಹಲಿ: 12,850 ರೂ.
- ಮುಂಬೈ: 12,835 ರೂ.
ಇದನ್ನೂ ಓದಿ : ಕೇಂದ್ರ ಸರ್ಕಾರದ NMPT ಸಂಸ್ಥೆಯಲ್ಲಿ 31 ಹುದ್ದೆಗಳ ನೇಮಕಾತಿ : ಬಿ.ಇ ಮುಗಿಸಿದವರಿಗೆ ಗುಡ್ ನ್ಯೂಸ್



















