ಬೆಂಗಳೂರು: ಬೆಂಗಳೂರುನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಬ್ರೂಕ್ ಫೀಲ್ಡ್ ಪ್ರದೇಶದ HP ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ಕಚೇರಿಗೆ ತೆರಳುತ್ತಿದ್ದ ದಿಲೀಪ್ ಕಾರಿಯ ಎಂಬ ವ್ಯಕ್ತಿಯ ಮೇಲೆ ಡೆಲ್ಲಿ ನೋಂದಾಯಿತ ಕಾರಿನಲ್ಲಿ ಬಂದಿದ್ದ ಇಬ್ಬರು ಆಗಂತಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಕಾರಿನ ಗಾಜು ಒಡೆದು, ಕಾರು ಮಾಲೀಕನ ಮುಖಕ್ಕೆ ಪಂಚ್ ಮಾಡಿ ಗಾಯಪಡಿಸಲಾಗಿದೆ ಎನ್ನಲಾಗಿದೆ. ಯಾವುದೇ ಕಾರಣವಿಲ್ಲದೆ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ.
DL8CAZ2473 ಸಂಖ್ಯೆಯ ಡೆಲ್ಲಿ ರಿಜಿಸ್ಟ್ರೇಷನ್ ಹೊಂದಿದ ಕಾರಿನಲ್ಲಿದ್ದವರಿಂದ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ. ಈ ಕಾರಿನ ಮೇಲೆ ಈಗಾಗಲೇ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವ ಮಾಹಿತಿಯೂ ಲಭ್ಯವಾಗಿದೆ.
ಘಟನೆ ಸಂಬಂಧ ಸಂತ್ರಸ್ತರು ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ :ಪುಕ್ಸಟ್ಟೆ ಸಿಗರೇಟ್ ಕೊಟ್ಟಿಲ್ಲವೆಂದು ಕಾಂಡಿಮೆಂಟ್ಸ್ ಮಾಲೀಕರ ಮೇಲೆ ಹಲ್ಲೆಗೆ ಯತ್ನ


















