ಬೆಂಗಳೂರು: ಈ ವಾರವೇ ಬೆಂಗಳೂರಿಗೆ ಮತ್ತೊಂದು ದರ ಏರಿಕೆಯ ಶಾಕ್ ಎದುರಾಗುವ ಸಾಧ್ಯತೆ ಇದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವುದರೊಂದಿಗೆ ಬಸ್ ದರ ಏರಿಕೆ ಮಾಡಲಾಗಿತ್ತು. ಆನಂತರ ಮೆಟ್ರೋ ಏರಿಕೆ ಮಾಡಲಾಯಿತು. ಮೆಟ್ರೋ ಏರಿಕೆಯ ಶಾಕ್ ನಿಂದ ಜನರು ಹೊರ ಬರುತ್ತಿರುವ ಸಂದರ್ಭದಲ್ಲೇ ಮತ್ತೊಂದು ಶಾಕ್ ಎದುರಾಗುತ್ತಿದೆ.
ಇದೇ ಗುರುವಾರ ನೀರಿನ ದರ ಪರಿಷ್ಕರಣೆ ಫೈನಲ್ ಆಗಲಿದೆ. ಹೀಗಾಗಿ ಬಜೆಟ್ ಗೂ ಮುನ್ನವೇ ಮತ್ತೊಂದು ದರ ಏರಿಕೆಯಾಗುವುದು ಶತಸಿದ್ಧ ಎನ್ನಲಾಗುತ್ತಿದೆ. ಆದರೆ, ಮೆಟ್ರೋ ದರ ಏರಿಕೆಯಿಂದಾಗಿ ಈಗಾಗಲೇ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಕಾದು ನೋಡುವ ತಂತ್ರ ಉಪಯೋಗಿಸುತ್ತದೆಯಾ? ಎಂಬುವುದನ್ನು ಕೂಡ ಕಾಯ್ದು ನೋಡಬೇಕಿದೆ.
ಅಥವಾ ಇದೇ ಸಂದರ್ಭದಲ್ಲಿ ದರ ಏರಿಸಿ ಸಿಲಿಕಾನ್ ಸಿಟಿ ಜನರಿಗೆ ಸರ್ಕಾರ ಶಾಕ್ ನೀಡಲಿದೆಯಾ? ಎಂಬುವುದನ್ನು ಕೂಡ ಕಾಯ್ದು ನೋಡಬೇಕಿದೆ. ಗುರುವಾರ ನಡೆಯಲಿರುವ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈ ವಿಷಯ ಪ್ರಸ್ತಾಪವಾಗಲಿದೆ. ಈಗಾಗಲೇ ಜಲ ಮಂಡಳಿ ಶೇ. 30ರಷ್ಟು ದರ ಏರಿಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.