ಮೈಸೂರು: ದರ್ಶನ್ ಫಾರಂ ಹೌಸ್ ನಲ್ಲಿ ವಿದೇಶಿ ಬಾತುಕೋಳಿ ಸಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದ್ದು ವಿಚಾರಣೆಯನ್ನು ಮುಂದೂಡಲಾಗಿದೆ.
ಕೋರ್ಟ್ ವಿಚಾರಣೆಯ ಹಿನ್ನೆಲೆಯಲ್ಲಿ ನಟ ದರ್ಶನ್ ಇಂದು ತಿ.ನರಸಿಪುರ ಕೋರ್ಟ್ ಗೆ ಹಾಜರಾಗಬೇಕಿತ್ತು. ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 4ಕ್ಕೆ ಮುಂದೂಡಿದೆ. ಅರಣ್ಯ ಇಲಾಖೆಯ ಪ್ರತಿನಿಧಿಗಳು ಕೋರ್ಟ್ ಗೆ ಹಾಜರಾಗದ ಹಿನ್ನಲೆಯಲ್ಲಿ ಕೋರ್ಟ್ ವಿಚಾರಣೆಯ ದಿನಾಂಕವನ್ನು ಮುಂದೂಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ 2 ವರ್ಷದ ಹಿಂದೆ ನೋಟಿಸ್ ನೀಡಿ ಎಫ್ ಐಆರ್ ದಾಖಲಿಸಿದ್ದರು. ವಿದೇಶಿ ಬಾತುಕೋಳಿ ಸಾಕಲು ಯಾವುದೇ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಿಸಲಾಗಿತ್ತು. ಬಾರ್ ಹೆಡೆಡ್ ಗೂಸ್ ಬಾತುಕೋಳಿಯನ್ನು ನಟ ದರ್ಶನ್ ಸಾಕಿದ್ದರು ಎನ್ನಲಾಗಿದೆ.
ಟಿ.ನರಸಿಪುರ ತಾಲೂಕಿನ ಕೆಂಪಯ್ಯನಹುಂಡಿ ಫಾರಂ ಹೌಸ್ ನಲ್ಲಿ ಬಾತುಕೋಳಿ ಸಾಕಿದ್ದರು. ಸಂದರ್ಶನವೊಂದರಲ್ಲಿ ದರ್ಶನ್ ಈ ಕುರಿತು ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ದರ್ಶನ್, ವಿಜಯಲಕ್ಷ್ಮಿ, ತೋಟದ ಮ್ಯಾನೇಜರ್ ನಾಗರಾಜುಗೆ ಕೋರ್ಟ್ ನೋಟಿಸ್ ನೀಡಿತ್ತು.


















