ಮೈಸೂರು: ಹಾಸನದ ಮತ್ತೋರ್ವ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹಾಸನ ಮೂಲದ ಇಂಜಿನಿಯರ್ ಮೈಸೂರಿನಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಐದು ದಿನಗಳ ಹಿಂದೆ ವ್ಯಾಯಾಮ ಮಾಡುವಾಗ ಈ ಘಟನೆ ನಡೆದಿದೆ. ಮೈಸೂರಿನ ವಿಜಯನಗರದಲ್ಲಿರುವ ಜಿಮ್ ನಲ್ಲಿ ಈ ಘಟನೆ ನಡೆದಿದೆ. ಹಾಸನ ಮೂಲದ ಬಿ.ಎನ್. ಶ್ರೀಧರ್, ಮೈಸೂರಿನ ಗೋಕುಲಂನಲ್ಲಿ ವಾಸಿಸುತ್ತಿದ್ದರು. 51 ವರ್ಷದ ಶ್ರೀಧರ್ ಮೈಸೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮೂಲತಃ ಹೊಳೆನರಸೀಪುರ ತಾಲೂಕಿನ ಜುಂಜನಹಳ್ಳಿ ಗ್ರಾಮದವರಾಗಿದ್ದಾರೆ. ನಾಗರತ್ನಮ್ಮ ಹಾಗು ನಿಂಗೇಗೌಡ ಅವರ ಮಗ ಎನ್ನಲಾಗಿದೆ. ಸದ್ಯ ಸುದ್ದಿ ಕೇಳಿ ಕುಟುಂಬಸ್ಥರು ಗೋಳಾಡುತ್ತಿದ್ದಾರೆ.