ಚಿಕ್ಕಮಗಳೂರು: ಕಾಫಿನಾಡಲ್ಲಿ ಕೂಡ ಹಾರ್ಟ್ ಅಟ್ಯಾಕ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾರೆ.
ಅಜ್ಜಂಪುರ ಪಟ್ಟಣದ ಸಗೀರ್ ಅಹ್ಮದ್ (45) ಸಾವನ್ನಪ್ಪಿದ್ದಾರೆ. ಊಟ ಮಾಡುವಾಗ ಸಗೀರ್ ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಆಗ ಕುಸಿದು ಬಿದ್ದಿದ್ದಾರೆ. ಸಗೀರ್ ಲಾರಿ ಚಾಲಕನಾಗಿದ್ದರು ಎನ್ನಲಾಗಿದೆ.
ಕಾಫಿನಾಡಿನಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನ ಆತಂಕ ಪಡುತ್ತಿದ್ದಾರೆ.