ಪ್ರೀತಿಸಿ ಮದುವೆಯಾಗಿದ್ದ ನಿವೇದಿತಾ ಗೌಡ, ಚಂದನ್ ಶೆಟ್ಟಿ ಡಿವೋರ್ಸ್ ಪಡೆದಿದ್ದರು. ಈಗ ಇಬ್ಬರೂ ದಿಢೀರ್ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಆದರೆ, ಈಗ ಇಬ್ಬರೂ ತಬ್ಬಿಕೊಂಡಿದ್ದಾರೆ. ಈ ವೇಳೆ ನಿವೇದಿತಾ ಕಣ್ಣೀರು ಸುರಿಸಿದ್ದಾರೆ. ಚಂದನ್, ಕಣ್ಣೀರು ಒರೆಸಿದ್ದಾರೆ. ಆದರೆ, ಇದು ನಿಜ ಅಲ್ಲ. ಸಿನಿಮಾವೊಂದರ ಕಥೆ. ಆದರೆ, ನಟನೆಯ ಮಧ್ಯೆಯೇ ಈ ಜೋಡಿ ಭಾವುಕವಂತೂ ಆಗಿತ್ತು. ಮುದ್ದು ರಾಕ್ಷಿಸಿ ಚಿತ್ರದಲ್ಲಿ ಇಬ್ಬರ ನಟನೆ ಈ ರೀತಿ ಕಂಡು ಬಂದಿತ್ತು. ದೃಶ್ಯದ ಚಿತ್ರೀಕರಣದ ನಂತರ ಸುದ್ದಿಗೋಷ್ಠಿಯಲ್ಲಿ ಇಬ್ಬರೂ ಮಾತನಾಡಿದರು.
“ಮನುಷ್ಯ ಅಂದಕೂಡಲೇ ಎಮೋಶನ್ಸ್ ಇರುತ್ತದೆ. ಹಾಗೆಯೇ ನಮಗೂ ನಾಲ್ಕು ವರ್ಷ ಜೊತೆಗಿದ್ದೆವು. ಈಗ ದೂರ ಆಗಿದ್ದೇವೆ. ನಿನ್ನೆ ರಾತ್ರಿಯಿಂದಲೇ ನಾನು ನನ್ನ ಮನಸ್ಸು ಗಟ್ಟಿಮಾಡಿಕೊಳ್ಳೋಣ ಅಂದುಕೊಂಡಿದ್ದೆ. ನಿಜಕ್ಕೂ ನಮಗೆ ಇದು ಎಮೋಶನಲ್ ಆಗಿರುತ್ತದೆ. ಸಿನಿಮಾ ಕೆಲಸ ಆಗಿದ್ದರಿಂದ ಇಬ್ಬರೂ ಪ್ರೊಫೆಶನಲ್ ಆಗಿಯೇ ಇರ್ತೀವಿ. ಈ ಸಿನಿಮಾಕ್ಕೆ ನಾನು ಸಂಗೀತ ಸಂಯೋಜನೆ ಮಾಡಿಲ್ಲ. ಈ ಸಿನಿಮಾದಲ್ಲಿ ನಿವೇದಿತಾ ದೃಶ್ಯ ಜಾಸ್ತಿ ಇದೆ. ಅವರಿಗೆ ಬಾಯ್‌ಫ್ರೆಂಡ್ ಆಗಿ ಸಪೋರ್ಟ್ ಮಾಡಿರೋ ಪಾತ್ರದಲ್ಲಿ ನಾನು ನಟಿಸಿದ್ದೇನೆ” ಎದು ಚಂದನ್ ಹೇಳಿದ್ದಾರೆ.
ನಿವೇದಿತಾ ಮಾತನಾಡಿ, “ನಾಲ್ಕು ವರ್ಷ ನಾವು ಒಂದು ಬಾಂಧವ್ಯ ಹೊಂದಿದ್ದೇವೆ. ನಿಜಕ್ಕೂ ಇದು ಎಮೋಶನಲ್ ಆಗಿತ್ತು. ಯಾವುದೇ ಪ್ರಾಜೆಕ್ಟ್ ಇದ್ದರೂ ಮುಗಿಯುವಾಗ ಬೇಸರ ಆಗುತ್ತದೆ. ಹಾಗೆಯೇ ಈ ಸಿನಿಮಾ ಶೂಟಿಂಗ್ ಮುಗಿಯುತ್ತಿದೆ. ಹೀಗಾಗಿ ಅಳು ಬಂತು ಎಂದಿದ್ದಾರೆ.
ನಿರ್ದೇಶಕರು ಈ ಕುರಿತು ಮಾತನಾಡಿ, “ಈ ಹಿಂದೆ ಒಂದು ದೃಶ್ಯದಲ್ಲಿ ಹಗ್ ಮಾಡಿ, ನಿವೇದಿತಾ ಗೌಡ ಇಪ್ಪತ್ತು ನಿಮಿಷ ಅತ್ತಿದ್ದಾರೆ. ಆಮೇಲೆ ಸಮಾಧಾನ ಮಾಡಿದ್ದೇವೆ. ಚಂದನ್-ನಿವೇದಿತಾ ಗೌಡ ಅವರ ಜೀವನದಲ್ಲಿ ನಡೆದ ದೃಶ್ಯಗಳು ಸಿನಿಮಾದಲ್ಲಿ ಲಿಂಕ್ ಆಗುತ್ತವೆ. ಹೀಗಾಗಿ ಅವರೇನು ಅಂತ ನನಗೆ ಗೊತ್ತಿದೆ ಎಂದಿದ್ದಾರೆ.