ಢಾಕಾ : ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಸಾಲು ಸಾಲು ಹಿಂದೂಗಳ ಕೊಲೆ ನಡೆಯುತ್ತಿದೆ. ನಿನ್ನೆಯೂ ಸಹ ಹಿಂದೂ ಯುವಕನನ್ನು ಹತ್ಯೆ ಮಾಡಲಾಗಿದ್ದು, ಬಾಂಗ್ಲಾದೇಶದ ನರಸಿಂಗಡಿಯಲ್ಲಿ ರಾತ್ರಿ ಮಲಗಿದ್ದಾಗ ವೇಳೆ ಚಂಚಲ್ ಚಂದ್ರ ಭೌಮಿಕ್ ಎಂಬ 23 ವರ್ಷದ ಹಿಂದೂ ಯುವಕನನ್ನು ಅಂಗಡಿಯೊಳಗೆ ಸುಟ್ಟು ಹಾಕಲಾಗಿದೆ. ದಾಳಿಕೋರರು ಅಂಗಡಿಯ ಶಟರ್ ಮುಚ್ಚಿ, ಪೆಟ್ರೋಲ್ ಸುರಿದು, ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಚಂಚಲ್ ಸುಟ್ಟು ಸಾಯುವವರೆಗೂ ದುಷ್ಕರ್ಮಿಗಳು ಹೊರಗೆ ಇದ್ದು, ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ಬಳಿಕ ದಾಳಿಕೋರರು ಗ್ಯಾರೇಜ್ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದೃಶ್ಯ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗ್ಯಾರೇಜ್‌ಗೆ ಬೆಂಕಿ ಬಿದ್ದ ಕೆಲವೇ ಸಮಯದಲ್ಲಿ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ನರಸಿಂಗಡಿ ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿ ಸುಮಾರು 1 ಗಂಟೆಯ ಪ್ರಯತ್ನದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಸಜೀವ ದಹನವಾಗಿದ್ದ ಚಂಚಲ್ ಅವರ ದೇಹವನ್ನ ಹೊರ ತೆಗೆದಿದ್ದಾರೆ.
ಇನ್ನು ಘಟನೆ ಪೂರ್ವ ನಿಯೋಜಿತ ಕೃತ್ಯ ಎಂದು ಕುಟುಂಸ್ಥರು ಆರೋಪಿಸಿದ್ದು, ದಾಳಿಕೋರರನ್ನ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಚಂಚಲ್ ಹತ್ಯೆಗೆ ನಿಖರ ಕಾರಣ ಪತ್ತೆಹಚ್ಚಲು ಮುಂದಾಗಿದ್ದಾರೆ.
ಚಂಚಲ್ ಅವರ ಕುಟುಂಬದ ಏಕೈಕ ಜೀವನಾಧಾರವಾಗಿದ್ದು, ಅವರ ತಂದೆಯ ಮರಣದ ನಂತರ ಅವರ ಅನಾರೋಗ್ಯ ಪೀಡಿತ ತಾಯಿ, ಅಂಗವಿಕಲ ಅಣ್ಣ ಮತ್ತು ಕಿರಿಯ ಸಹೋದರನನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಮೃತ ಚಂಚಲ್ ಅವರು ಕಳೆದ ಆರು ವರ್ಷಗಳಿಂದ ನರಸಿಂಗಡಿಯ ಸ್ಥಳೀಯ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದು, ಸ್ಥಳೀಯ ನಿವಾಸಿಗಳು ಮತ್ತು ಗ್ಯಾರೇಜ್ ಮಾಲೀಕರು ಚಂಚಲ್ ಅವರನ್ನು ಸರಳ ಮತ್ತು ಪ್ರಾಮಾಣಿಕ ಯುವಕ ಎಂದು ಹೇಳುತ್ತಿದ್ದರು.
ಇದನ್ನೂ ಓದಿ : ಜಮೀನು ವಿವಾದ | ಗದ್ದೆಯಲ್ಲಿ ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ನಡೆಸಿದ ದುರುಳರು
.



















