ಬೆಂಗಳೂರು | ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಮೈಲಾರಪ್ಪ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಈ ಹಿಂದೆ ಮೈಲಾರಪ್ಪ ವಿರುದ್ದ ಪವಿತ್ರಾ ಎಂಬಾಕೆ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ್ದರು. ಇದೇ ಕೇಸ್ ಸಂಬಂಧ ಮೈಲಾರಪ್ಪನನ್ನ ಪೊಲೀಸರು ಬಂದಿಸಿದ್ದರು.
ಇದೀಗ ಲೈಂಗಿಕ ಕಿರುಕುಳ ಕೇಸಲ್ಲಿ ಜಾಮೀನು ಪಡೆದು ಹೊರಗಿರುವ ಮೈಲಾರಪ್ಪಗೆ ಸಂಕಷ್ಟ ಎದುರಾಗಿದ್ದು, ಪವಿತ್ರಾ ಅವರು ಬಸವೇಶ್ವರನಗರ ಠಾಣೆಯಲ್ಲಿ ಮೈಲಾರಪ್ಪ ವಿರುದ್ದ ಮತ್ತೊಂದು ದೂರು ದಾಖಲಿಸಿದ್ದಾರೆ.
ಹೌದು.. ದೂರುದಾರರ ಮೇಲೆ ಬೆದರಿಕೆ ಹಾಕ್ತಿದ್ದಾರೆಂದು ಮತ್ತೆ ಪವಿತ್ರಾ ದೂರು ನೀಡಿದ್ದಾರೆ. ವಾಯ್ಸ್ ಮೆಸೇಜ್ ಮೂಲಕ ಅಶ್ಲೀಲ ಶಬ್ಧ ಬಳಕೆ ಮಾಡಿ ಪ್ರಾಣ ಬೆದರಿಕೆ ಹಾಕುತ್ತಿದ್ದು, ಅಮೆರಿಕಾದಲ್ಲಿರುವ ಪವಿತ್ರಾಳ ಸಹೋದರನಿಗೂ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನಿನ್ನ ತಂಗಿಗೆ ಕೇಸ್ ವಾಪಾಸ್ ತೆಗೆದುಕೊಳ್ಳೊಕೆ ಹೇಳು, ಇಲ್ಲ ಅಂದ್ರೆ ಪ್ರಾಣ ತೆಗೀತೀನಿ ಎಂದು ಬೆದರಿಕೆ ಸಂದೇಶ ರವಾನಿಸಲಾಗಿದೆ ಎಂದು ಪವಿತ್ರಾ ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕೆಲಸದ ಸಂದರ್ಭದಲ್ಲಿ ತನಗೆ ಲೈಂಗಿಕ ಕಿರಕುಳ ನೀಡಿದ್ದಾರೆಂದು ಮೈಲಾರಪ್ಪ ವಿರುದ್ದ ಪವಿತ್ರಾ ದೂರು ನೀಡಿದ್ದರು. ಆ ಬಳಿಕ ಮೈಲಾರಪ್ಪ ಮನೆ ಬಳಿ ಹೋಗಿ ಗಲಾಟೆ ಮಾಡಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಸದ್ಯ ಮೈಲಾರಪ್ಪನ ವಿರುದ್ಧ ಮತ್ತೊಂದು ದೂರು ದಾಖಲಾಗಿದ್ದು, ಸಂಕಷ್ಟ ಎದುರಾದಂತಾಗಿದೆ.
ಇದನ್ನೂ ಓದಿ : ಶಾಲೆಯಲ್ಲಿ ಆಟವಾಡುತ್ತಿದ್ದಾಗಲೇ ಹೃದಯಾಘಾತ.. 9 ವರ್ಷದ ಬಾಲಕಿ ಸಾವು!


















