ಚಿತ್ರರಂಗಕ್ಕೆ ನಿಜಕ್ಕೂ ಈ ಹೃದಯಾಘಾತವೆನ್ನುವುದು ಪೆಂಡಭೂತವಾಗಿ ಕಾಡುತ್ತಿದೆ. ಎಳೆಯ ವಯಸ್ಸಿನಲ್ಲೇ ಕಲಾವಿದರ ಜೀವ ಹಿಂಡುತ್ತಿರುವ ಈ ಹೃದಯಾಘಾತ ಇದೀಗ ಮತ್ತೋರ್ವ ನಟಿಯನ್ನು ಬಲಿ ಪಡೆದಿದೆ.
ಬಾಲಿವುಡ್ ನಟಿ ಶೆಫಾಲಿ ಜರಿವಾಲ್ ತಮ್ಮ 42ನೇ ವಯಸ್ಸಿಗೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.ಹಾಗಂತಾ ಈ ಹೃದಯಾಘಾತ ಸರಣಿ ಇದೇ ಮೊದಲೇನಲ್ಲ. ಕನ್ನಡದ ಪವರ್ ಸ್ಟಾರ್ ಖ್ಯಾತಿಯ ಪುನೀತ್ ರಾಜ್ ಕುಮಾರ್ ಕೂಡಾ ಇದೇ ರಾಕ್ಷಸನ ಅಟ್ಟಹಾಸಕ್ಕೆ ಬಲಿಯಾಗಿದ್ದು. ಕೇವಲ 46ನೇ ವಯಸ್ಸಿಗೆ ಈ ಕರಾಳ ವಿಧಿಯಾಟಕ್ಕೆ ಪುನೀತ್ ವಿಧಿವಶರಾಗಿದ್ದರು.
ಮತ್ತೋರ್ವ ಕನ್ನಡದ ಯುವ ತಾರೆ ಚಿರಂಜೀವಿ ಸರ್ಜಾಗೂ ಅವರ 35ನೇ ವಯಸ್ಸಿಗೇ ಹೃದಯಾಘಾತ ಕಿತ್ತು ತಿಂದಿತ್ತು ಹಿಂದಿ ಬಿಗ್ ಬಾಸ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ, ಹಾಸ್ಯ ಕಲಾವಿದ ರಾಜೂ ಶ್ರೀವಾತ್ಸವ್, ಹೆಸರಾಂತ ಗಾಯಕ ಕೆಕೆ, ನಿರ್ದೇಶಕ ರಾಜ್ ಕುಶಾಲ್, ನಟ, ನಿರ್ದೇಶಕ ಸತೀಶ್ ಕೌಶಿಕ್, ತಮಿಳು ಹಾಸ್ಯ ಕಲಾವಿದ ವಿವೇಕ್ ಕೂಡಾ ಇದೇ ಹೃದಯಾಘಾತಕ್ಕೆ ಪ್ರಾಣತೆತ್ತಿದ್ದಾರೆ. 1969ರಲ್ಲಿ ಬಾಲಿವುಡ್ ನ ಲೆಜೆಂಡ್ ನಟಿ ಮಧುಬಾಲಾ ತಮ್ಮ 36ನೇ ವಯಸ್ಸಿಗೇ ಹೃದಯಾಘಾತಕ್ಕೆ ಬಲಿಯಾದವರೇ.