ವೀರಶೈವ ಲಿಂಗಾಯತ ಶಿವಾಚಾರ್ಯರ ಶೃಂಗಸಭೆಯಲ್ಲಿ 12 ನಿರ್ಣಯಗಳನ್ನು ಅಂಗೀಕಾರಗೊಳಿಸಲಾಯಿತು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ದಾವಣಗೆರೆಯ ರೇಣುಕಾ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆದ ವೀರಶೈವ ಲಿಂಗಾಯತ ಶಿವಾಚಾರ್ಯರ ಶೃಂಗಸಭೆ ಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
40 ವರ್ಷಗಳ ನಂತರ ನಡೆದ ಕಾಲ ನಡೆದ ಶಿವಾಚಾರ್ಯರ ಶೃಂಗ ಸಭೆಯ ಇಂದಿನ ಸಮಾರೋಪ ಸಮಾರಂಭದಲ್ಲಿ 12 ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ಶಿವಾಚಾರ್ಯರ ಶೃಂಗ ಸಭೆಯ ಪ್ರಮುಖ ನಿರ್ಣಯಗಳು
- ಜಾತಿಗಣತಿ ವೇಳೆ ವೀರಶೈವ ಲಿಂಗಾಯತ ಎಂದು ಬರೆಯಿಸಬೇಕು.
- ಉಪಜಾತಿ ಯಾವುದೇ ಇದ್ದರೂ ವೀರಶೈವರು ಒಗ್ಗಟ್ಟಿನಿಂದ ಇರಬೇಕು.
- ಒಳ ಪಂಗಡಗಳನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಬೇಕು.
- ಜಾತಿಗಣತಿ ವಿಚಾರವಾಗಿ ನಿಯೋಗದ ಮೂಲಕ ಪ್ರಧಾನಿ ಭೇಟಿ ಮಾಡುವುದು.
ಸಮ್ಮೇಳನದಲ್ಲಿ ಮಾತನಾಡಿದ ರಂಭಾಪುರಿ ಶ್ರೀ, ಸಮಾಜದ ಹಿತದೃಷ್ಟಿಯಿಂದಾಗಿ ವೀರಶೈವ ಧರ್ಮ ಸ್ಥಾಪನೆಯಾಗಿದೆ. ಆಧುನಿಕ ಕಾಲದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ಪ್ರವೇಶವಾಗಿದೆ. ರಾಜಕೀಯ ಕ್ಷೇತ್ರ ಕಲುಷಿತವಾಗಿದೆ, ಧಾರ್ಮಿಕ ಕ್ಷೇತ್ರ ಹೊರತಾಗಿಲ್ಲ. ಸಂಸ್ಕಾರ, ಸಂಸ್ಕೃತಿ ಕೊಟ್ಟಿದ್ದು ವೀರಶೈವ ಧರ್ಮ. ವೀರಶೈವ ಸಮುದಾಯದಲ್ಲಿ ನೂರಾರು ಒಳಪಂಗಡಗಳಿವೆ. ಜಾತಿಗೊಂದು ಮಠಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಪಂಚಪೀಠಗಳು ಧೃತಿಗೆಡಬೇಕಾಗಿಲ್ಲ. ಸಮುದಾಯದ ಬಲವರ್ಧನೆ ಪಂಚಪೀಠಗಳಿಂದ ಮಾತ್ರ ಸಾಧ್ಯ ಎಂದಿದ್ದಾರೆ.
ಸಮಾಜದವರು 16 ವರ್ಷಗಳಿಂದ ಪಂಚಪೀಠಗಳು ಒಂದಾಗಬೇಕೆಂದು ಕನಸು ಕಾಣುತ್ತಿದ್ದರು. ಅದು ಸಾಕಾರವಾಗಿದೆ. ಎಲ್ಲ ಸಮುದಾಯದ ಜನಕ್ಕೆ ಆಧ್ಯಾತ್ಮಿಕ ಚಿಂತನೆ ನೀಡಿದಂತಾಗಿದೆ. ನಮ್ಮ ಕರೆಗೆ ಸ್ಪಂದಿಸಿ ಎಲ್ಲ ಪೀಠದವರು ಬಂದಿದ್ದಾರೆ. ವೀರಶೈವ ಲಿಂಗಾಯತ ದೊಡ್ಡ ಸಮಾಜ. ಸಮಾಜಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ.