ಕೊಪ್ಪಳ : ಹನುಮ ದ್ವ್ರತ ಹಿನ್ನೆಲೆ ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಪರ್ವತದಲ್ಲಿ ವಿಶೇಷ ಪೂಜೆಯೊಂದಿಗೆ ಲಕ್ಷಾಂತರ ಭಕ್ತರಿಂದ ಮಾಲೆ ವಿಸರ್ಜನೆ ನಡೆಯುತ್ತಿದೆ.
ಮಧ್ಯರಾತ್ರಿ 1 ಗಂಟೆಯಿಂದಲೇ ಆಂಜನೇಯನ ದರ್ಶನಕ್ಕೆ ಭಕ್ತ ಗಣ ಹರಿದು ಬರುತ್ತಿದೆ. ಪ್ರಧಾನ ಅರ್ಚಕ ವಿದ್ಯಾದಾಸಬಾಬಾ ನೇತೃತ್ವದಲ್ಲಿ ಹನುಮನಿಗೆ ಹಾಲಿನ ಅಭಿಷೇಕ, ನೂರ ಒಂದು ಎಳನೀರಿನಿಂದ ವಿಶೇಷ ಅಭಿಷೇಕ ಪಂಚಾಮೃತ ಅಭಿಷೇಕದ ಮೂಲಕ ವಿಶೇಷ ಪೂಜೆ ನಡೆದಿದೆ.
ವಿಶೇಷ ಆಲಂಕಾರದಿಂದ ಭಕ್ತರ ಅಂಜನಾದ್ರಿ ಪರ್ವತ ಗಮನ ಸೆಳೆಯುತ್ತಿದ್ದಾರೆ. 575 ಪರ್ವತದ ಮೆಟ್ಟುಲೇರಿ ಬಂದ ಭಕ್ತ ಸಾಗಾರ ಆಂಜನೇಯನ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ : ಶ್ರೀಲಂಕಾಕ್ಕೆ ಭಾರತದ ಶೀಘ್ರ ನೆರವು : ಸನತ್ ಜಯಸೂರ್ಯ ಪ್ರಧಾನಿ ಮೋದಿ ಹಾಗೂ ಜೈಶಂಕರ್‌ಗೆ ಕೃತಜ್ಞತೆ



















