ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಿರುವುದು ಬಹಿರಂಗವಾಗುತ್ತಿದ್ದಂತೆ ಈಗ ಶುದ್ಧೀಕರಣ ಕಾರ್ಯ ನಡೆಯುತ್ತಿದೆ.
ಸೋಮವಾರ ತಿರುಪತಿ ದೇವಸ್ಥಾನದ ಶುದ್ಧೀಕರಣ ಕಾರ್ಯ ನಡೆಯುತ್ತಿದೆ. ತಿರುಪತಿ ತಿರುಮಲ ಆಡಳಿತ ಮಂಡಳಿಯು ರಾಮಕೃಷ್ಣ ದೀಕ್ಷಿತ್ ನೇತೃತ್ವದಲ್ಲಿ ನಡೆದ ಹೋಮ ನಡೆದಿದೆ. ತಿಮ್ಮಪ್ಪನ ಭಕ್ತರಲ್ಲಿ ನಂಬಿಕೆ ಮೂಡಿಸಲು, ಬಂಗಾರು ಬಾವಿ ಯಾಗ ಶಾಲೆಯಲ್ಲಿ ಹೋಮ ನಡೆದಿದೆ. ವಾಸ್ತು ಶುದ್ಧಿ, ಯಂತ್ರ ಶುದ್ಧಿ, ಸ್ಥಳ ಶುದ್ಧಿ , ಪಂಚಗವ್ಯ ಸಂಪ್ರೋಕ್ಷಣ ಮೂಲಕ, ಅನ್ನ ಪ್ರಸಾದ ತಯಾರಾಗುವ ಸ್ಥಳ, ಲಡ್ಡು ತಯಾರಾಗುವ ಸ್ಥಳ, ತುಪ್ಪ ಬಳಸುತ್ತಿದ್ದ ಎಲ್ಲ ಸ್ಥಳಗಳಲ್ಲಿ ಪಂಚಗವ್ಯ ಸಂಪ್ರೋಕ್ಷಣೆ ಮಾಡಲಾಗಿದೆ.
ಕಡಿಮೆ ಗುಣಮಟ್ಟದ ತುಪ್ಪ ಬಳಕೆಯಿಂದಾಗಿ ಈ ರೀತಿಯಾಗಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ತುಪ್ಪ ಖರೀದಿಗೆ ಇದ್ದ ಹಲವು ನಿಯಮಗಳನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಬದಲಾಯಿಸಲಾಯಿತು. ತಿರುಮಲದ ಶುದ್ಧೀಕರಣಕ್ಕೆ ಇಂದು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣ ನಡೆದಿದೆ ಎಂದು ಕೂಡ ಹೇಳಿದ್ದಾರೆ.
ತುಪ್ಪ ಪೂರೈಸುವವರಿಗೆ ಕನಿಷ್ಠ ಮೂರು ವರ್ಷಗಳ ಅನುಭವ ಇರಬೇಕು ಎಂಬ ನಿಯಮ ಇತ್ತು. ಇದನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು, ಒಂದು ವರ್ಷಕ್ಕೆ ಇಳಿಸಿತು. ತುಪ್ಪ ಪೂರೈಕೆದಾರರ ವಹಿವಾಟು 250 ಕೋಟಿ ರೂ. ಇರಬೇಕು ಎಂಬ ನಿಯಮ ಇತ್ತು. ಇದನ್ನು 150 ಕೋಟಿಗರೂ. ಇಳಿಸಿತ್ತು. ಹೀಗಾಗಿ ತುಪ್ಪ ಖರೀದಿಗೆ ಇದ್ದ ನಿಯಮಗಳ ಬದಲಾವಣೆ ಸೇರಿದಂತೆ ಅಕ್ರಮಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗುವುದು ಎಂದು ಹೇಳಿದ್ದಾರೆ.