ಸ್ಫೋಟಕ ಬ್ಯಾಟ್ಸಮನ್ ಗಳಿಂದ ತುಂಬಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಅನಿಕೇತ್ ವರ್ಮಾ ತಾವಾಡಿದ ಮೂರನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ, ಮೊದಲು ಬೌಲಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರರನ್ನು ಅಗ್ರ ಕ್ರಮಾಂಕವನ್ನು ಬಹುಬೇಗನೇ ಕೆಡವಿತು. ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಸುಲಭವಾಗಿ ಔಟಾದರು.
ನಿತೀಶ್ ಕುಮಾರ್ ರೆಡ್ಡಿ ಕೂಡ ವಿಶೇಷವಾದದ್ದೇನನ್ನೂ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹೈದರಾಬಾದ್ ತಂಡ ಕೇವಲ 37 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆ ಸಮಯದಲ್ಲಿ 23 ವರ್ಷದ ಅನಿಕೇತ್ ವರ್ಮಾ ಇನ್ನಿಂಗ್ಸ್‌ನ ಜವಾಬ್ದಾರಿ ವಹಿಸಿಕೊಂಡು ಅರ್ಧಶತಕ ಸಿಡಿಸಿದ್ದಾರೆ.
ಅನಿಕೇತ್ ವರ್ಮಾ ಲಕ್ನೋ ವಿರುದ್ಧದ ಪಂದ್ಯದಲ್ಲಿ 36 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು, ಇದರಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿವೆ. ಅನಿಕೇತ್ ಕೇವಲ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್‌ಗಳಿಂದ 74 ರನ್ ಗಳಿಸಿದರು.