ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂಜಾಟ ನಿಯಂತ್ರಣಕ್ಕೆ ಪೊಲೀರು ಟೊಂಕಕಟ್ಟಿ ನಿಂತಿದ್ದಾರೆ.
ಜೂಜಾಟದ ಅಡ್ಡಕ್ಕೆ ನುಗ್ಗಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಭಟ್ಕಳ ಠಾಣಾ ವ್ಯಾಪ್ತಿಯ ಬೆಳಕೆ ಗ್ರಾಮದ ಅರಣ್ಯ ಪ್ರದೇಶದಲ್ಲಿ 8 ಜನ ಆರೋಪಿಗಳು ಹಣ ಗಳಿಸುವ ಉದ್ಧೇಶದಿಂದ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದಾಗ ಭಟ್ಕಳ ಪೊಲೀಸ್ ಠಾಣೆಯ ಪಿ.ಐ ಹಾಗೂ ಸಿಬ್ಬಂದಿಗಳು ಹೋಗಿ 4 ಜನ ಆರೋಪಿತರನ್ನು ಬಂಧಿಸಿದ್ದಾರೆ. 1,98,030 ಸ್ವತ್ತನ್ನು ವಶಕ್ಕೆ ಪಡೆದು ಭಟ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.