ಹಾವೇರಿ: ಕೆರೆಯಲ್ಲಿ ಹೂಳು ತೆಗೆಯುತ್ತಿದ್ದ ವೇಳೆ ಪುರಾತನ ಕಾಲದ ಬಸವಣ್ಣ ಮೂರ್ತಿ ಪತ್ತೆಯಾಗಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಳಿ ಇರೋ ಬಾಳೆ ಕೆರೆಯಲ್ಲಿ ಹೂಳು ತೆಗೆಯುತ್ತಿದ್ದ ವೇಳೆ 3 ಅಡಿ ಎತ್ತರದ ಬಸವಣ್ಣ ಮೂರ್ತಿ ಪತ್ತೆಯಾಗಿದ್ದು, ಗ್ರಾಮದ ಜನರು ಬಸವಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲದೇ ಗ್ರಾಮದ ದೇವಸ್ಥಾನ ಬಳಿ ಪ್ರತಿಷ್ಠಾನ ಮಾಡಿ ಪೂಜೆ ಮಾಡಲು ಗ್ರಾಮದ ಜನರು ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ : ಜಿಎಂ ಸಕ್ಕರೆ ಕಾರ್ಖಾನೆ ವಿರುದ್ಧ ಬೆಳಗಾವಿ ರೈತರ ಆಕ್ರೋಶ!


















