ಕೇಂದ್ರ ಚುನಾವಣಾ ಆಯೋಗದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಯಾಗಿ ಐಎಎಸ್ ಅಧಿಕಾರಿ ವಿ.ಅನ್ಬುಕುಮಾರ್ ಅವರನ್ನು ನೇಮಿಸಲಾಗಿದೆ.
ಈ ಮೂಲಕ ಅನ್ಬುಕುಮಾರ್ ಅವರನ್ನು ರಾಜ್ಯ ವಸತಿ ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಅನ್ಬುಕುಮಾರ್ ಅವರು 2004ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದರು. ಈ ಹುದ್ದೆಯಲ್ಲಿ ಮನೋಜ್ ಕುಮಾರ್ ಮೀನಾ ಅವರು 2021ರ ಅಕ್ಟೋಬರ್ ನಿಂದ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ ಈ ಹುದ್ದೆಗೆ ಅನ್ಬುಕುಮಾರ್ ನೇಮಕವಾಗಿದ್ದಾರೆ.