ನವದೆಹಲಿ: ಓಯೋ ಕಂಪನಿ ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದು, ಅದರಂತೆ ಅವಿವಾಹಿತ ಜೋಡಿಗಳಿಗೆ ತನ್ನ ಹೋಟೆಲ್ ರೂಮ್ ಗಳನ್ನು ನೀಡುವುದಿಲ್ಲ ಎಂದು ಘೋಷಿಸಿದೆ.
ಈ ಮೂಲಕ ತನ್ನ ಪಾಲುದಾರ ಹೋಟೆಲ್ ಗಳಿಗಾಗಿ ಹೊಸ ಚೆಕ್ ಇನ್ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪುರುಷ ಮತ್ತು ಮಹಿಳಾ ಜೋಡಿಗಳು ಆನ್ ಲೈನ್ ಬುಕಿಂಗ್ ಮಾಡುವಾಗ ಅಥವಾ ಚೆಕ್ ಇನ್ ಮಾಡುವಾಗ ತಮ್ಮ ಮಧ್ಯೆ ಇರುವ ಸಂಬಂಧವನ್ನು ತೋರಿಸವು ಪುರಾವೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಪೊಲೀಸರು ಮತ್ತು ಹೋಟೆಲ್ ಪಾಲುದಾರರೊಂದಿಗೆ ಸುರಕ್ಷಿತ ಆತಿಥ್ಯ ನೀಡುವುದಕ್ಕಾಗಿ ಮತ್ತು ಓಯೋ ಬ್ರ್ಯಾಂಡಿಂಗ್ ಬಳಸುವ ಅನಧಿಕೃತ ಹೋಟೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಅಖಿಲ ಭಾರತ ಮಟ್ಟದಲ್ಲಿ ಓಯೋ ಈ ರೀತಿಯ ನಿಯಮ ಜಾರಿಗೆ ತರಲು ಮುಂದಾಗಿದೆ.
ಕುಟುಂಬಗಳು, ವಿದ್ಯಾರ್ಥಿಗಳು, ವ್ಯವಹಾರ, ಧಾರ್ಮಿಕ ಮತ್ತು ಏಕವ್ಯಕ್ತಿ ಪ್ರಯಾಣಿಕರಿಗೆ ಸುರಕ್ಷಿತ ಅನುಭವವನ್ನು ಒದಗಿಸುವ ಬ್ರಾಂಡ್ ಆಗಿ ತನ್ನನ್ನು ತಾನು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿ ಓಯೋ ಇರುವುದರಿಂದಾಗಿ ಈ ನಿಯಮ ಜಾರಿಗೆ ತಂದಿದೆ.