ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಇದೇ ಮೊದಲ ಬಾರಿಗೆ ಬಿಜೆಪಿ ಐತಿಹಾಸಿಕ ಜಯ ಸಾಧಿಸಿದೆ. ಬಿಜೆಪಿ ನೇತೃತ್ವದ ಮಹಾಯುತಿ ಭರ್ಜರಿ ಜಯ ಸಾಧಿಸಿದೆ. ವೈಯಕ್ತಿಕವಾಗಿ ಬಿಜೆಪಿಯ ಸಾಧನೆ, ಅಲ್ಲಿ ಮೋಡಿ ಮಾಡಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ 230 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಇದು ಕೂಡ ಐತಿಹಾಸಿಕ ದಾಖಲೆಯೇ ಸರಿ. ಚುನಾವಣಾ ಇತಿಹಾಸದಲ್ಲೇ ಮೈತ್ರಿಕೂಟವೊಂದರ ಅತ್ಯುತ್ತಮ ಪ್ರದರ್ಶನ ಇದು ಎನ್ನಲಾಗಿದೆ. ಬಿಜೆಪಿ ತಾನು ಸ್ಪರ್ಧಿಸಿದ 149 ಸ್ಥಾನಗಳಲ್ಲಿ 132ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕೆಲವು ಸ್ಥಾನಗಳಲ್ಲಿ ಅಂತರ ಕಡಿಮೆ ಇದ್ದು, ಒಂದೆರಡು ಸ್ಥಾನಗಳು ಆಚೆ ಈಚೆ ಆಗಬಹುದು. ಆದರೆ ಹೆಚ್ಚು ಕಡಿಮೆ 130ರ ಆಸುಪಾಸಿನಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆಯಲು ಪಕ್ಷವೊಂದು ಕನಿಷ್ಠ 28 ಸ್ಥಾನಗಳನ್ನು ಗೆಲ್ಲಬೇಕಿದೆ. ಆದರೆ, ಉದ್ಧವ್ ಠಾಕ್ರೆ ಶಿವಸೇನೆ ಬಣ 21, ಕಾಂಗ್ರೆಸ್ 19 ಹಾಗೂ ಶರದ್ ಪವಾರ್ ಎನ್‌ಸಿಪಿ ಬಣ 11ರಲ್ಲಿ ಮುನ್ನಡೆ ಸಾಧಿಸಿವೆ.