ಕೆಲವರ ಸ್ವಾಭಿಮಾನವೇ ಹಾಗೆ, ಯಾರ ಮುಂದೆಯೂ ಕೈ ಚೆಲ್ಲಿ ಕುಳಿತುಕೊಳ್ಳುವುದಿಲ್ಲ. ಇದಕ್ಕೆ ವಯಸ್ಸಿನ ತೊಂದರೆಯೂ, ಅಭ್ಯಂತರ ಬಂದರೂ ಸರಿಯೇ, ಎಷ್ಟೇ ವಯಸ್ಸಾದರೂ ತಮ್ಮ ಬದುಕನ್ನ ಯಾರ ನೆರಳಿನಲ್ಲಿಯೂ ಒತ್ತೆಯಾಗಿರಿಸುವುದಿಲ್ಲ. ಅಂತಹ ಬದುಕಿಗೊಂದು ಇಲ್ಲೊಬ್ಬ ತಾಯಿ ಸಾಕ್ಷಿಯಾಗಿ ನಿಂತಿದ್ದಾರೆ.
55ರ ಹರೆಯದಲ್ಲೂ ರಿಕ್ಷಾ ಓಡಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಗಲಿನಲ್ಲಿ ಕೆಲವು ಮಹಿಳೆಯರು ಕ್ಯಾಬ್ ಅಥವಾ ಇ-ರಿಕ್ಷಾಗಳನ್ನು ಓಡಿಸುವುದನ್ನು ನಾವು ನೋಡಿ ಆಶ್ಚರ್ಯ ಪಟ್ಟಿರುತ್ತೇವೆ. ಆದರೆ ಈ ಮಹಾ ತಾಯಿ ರಾತ್ರಿಯಲ್ಲೂ ರಿಕ್ಷಾ ಓಡಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. 55ರ ವಯಸ್ಸಿನಲ್ಲಿಯೂ ಆಟೋ ಓಡಿಸಿ ಜೀವನ ನಡೆಸುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಮಹಿಳೆಯ ಶ್ರಮ ಹಾಗೂ ಸ್ವಾಭಿಮಾನ ಕಂಡು ವ್ಯಕ್ತಿಯೊಬ್ಬರು ಅವರನ್ನು ಮಾತನಾಡಿಸಿದ್ದಾರೆ. ಈ ಸಂದರ್ಭದಲ್ಲಿ ಮಹಾತಾಯಿಯು ಆಡಿದ ಮಾತು ಎಲ್ಲರಿಗೂ ಮಾದರಿಯಾಗಿದೆ. ಯುವ ಪೀಳಿಗೆ ಈ ತಾಯಿಯ ಆ ಮಾತನ್ನು ಆದರ್ಶವಾಗಿಟ್ಟುಕೊಂಡರೆ, ಸಮಾಜ ಬಸವಣ್ಣನವರು ನುಡಿದಂತೆ ಕಾಯಕವೇ ಕೈಲಾಸವಾಗಿ ಬಿಡುತ್ತದೆ. ಭಿಕ್ಷೆ ಬೇಡುವುದಕ್ಕಿಂತ ದುಡಿದು ಹಣ ಸಂಪಾದಿಸಿ ಗೌರವಯುತವಾಗಿ ಬದುಕಲು ಪ್ರಯತ್ನಿಸುತ್ತಿರುವೆ ಎಂದು ಮಹಿಳೆ ಈ ವಿಡಿಯೋದಲ್ಲಿ ಹೇಳಿದ್ದಾರೆ. ಈ ಹೃದಯಸ್ಪರ್ಶಿ ವೀಡಿಯೊವನ್ನು @Gulzar_sahab ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೇವಲ 58 ಸೆಕೆಂಡುಗಳ ಈ ವಿಡಿಯೋ ನೆಟ್ಟಿಗರಿಂದ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಜುಲೈ 05ರಂದು ಹಂಚಿಕೊಂಡಿರುವ ಈ ವಿಡಿಯೋ ಕೇವಲ ಎರಡು ದಿನಗಳಲ್ಲಿ 70 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಮೂರು ಸಾವಿರಕ್ಕೂ ಅಧಿಕ ಜನರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 55ರ ಹರೆಯದಲ್ಲಿಯೂ ಈ ಮಹಾತಾಯಿಯ ಸ್ವಾವಲಂಬನೆಯ ಬದುಕು ಹಾಗೂ ದುಡಿದು ತಿನ್ನಬೇಕೆಂಬ ಅವರ ಹಂಬಲ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ನಮ್ಮ ಯುವ ಪೀಳಿಗೆ ಈ ವಿಡಿಯೋ ನೋಡಿ ನಾಚಬೇಕಲ್ಲವೇ?
