ಹಾಸನ: ಕನ್ನಡ ಮಾತನಾಡಿ ಎಂದಿದ್ದಕ್ಕೆ ಅಂಗಡಿ ಕೆಲಸದಾಕೆ ಕಿರಿಕ್ ಮಾಡಿರುವ ಘಟನೆ ಹಾಸನದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ನಡೆದಿದೆ.
ಬ್ಯಾಗ್ ಅಂಗಡಿಯ ಕೆಲಸದವಳು ಕನ್ನಡಕ್ಕೆ ಅವಮಾನ ಮಾಡಿ ದುರಹಂಕಾರದಿಂದ ವರ್ತಿಸಿದ್ದಾಳೆ. ಬ್ಯಾಗಿನ ದರವನ್ನು ಕೆಲಸದಾಕೆ ಹಿಂದಿಯಲ್ಲಿ ತಿಳಿಸಿದ್ದಾಳೆ. ಆದರೆ ಗ್ರಾಹಕರು ಕನ್ನಡದಲ್ಲಿ ದರ ತಿಳಿಸುವಂತೆ ಕೇಳಿದರು. ಇದರಿಂದ ಗ್ರಾಹಕ ಮತ್ತು ಕೆಲಸದಾಕೆ ನಡುವೆ ಮಾತಿನ ಚಕಮಕಿ ಶುರುವಾಗಿದೆ.
ಕನ್ನಡ ಮಾತನಾಡಲ್ಲ ಏನ್ ಮಾಡಯತ್ತೀಯಾ. ನಾನು ಹಿಂದಿನೇ ಮಾತಾಡುವುದೆಂದು ಧಮ್ಕಿ ಹಾಕಿದ್ದಾಳೆ. ಗ್ರಾಹಕರ ವಿರುದ್ಧ ದುರಹಂಕಾರದ ವರ್ತನೆ ತೋರಿಸಿದ್ದಾಳೆ.
ಕೆಲಸದಾಕೆಯ ಕನ್ನಡ ವಿರೋಧಿ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.



















