ಬೆಂಗಳೂರು: ರಾಜ್ಯದಲ್ಲಿ ಮಾನವೀಯತೆ ಕುಸಿಯುತ್ತಿದೆ. ದುಷ್ಕೃತ್ಯ ತಾಂಡವಾಡುತ್ತಿದೆ ಎಂಬುವುದಕ್ಕೆ ಅಪರಾಧ ಪ್ರಕರಣಗಳ ಸಂಖ್ಯೆ ಸಾರಿ ಸಾರಿ ಹೇಳುತ್ತಿದೆ. ಇದು ಪ್ರಜ್ಞಾವಂತರ ನಿದ್ದೆಗೆಡಿಸುವಂತೆ ಮಾಡುತ್ತಿದೆ.
ಪೊಲೀಸ್ ಇಲಾಖೆ ಕೂಡ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆಯೇ? ಎಂಬ ಆತಂಕ ಕೂಡ ಕಾಡುತ್ತಿದೆ. 2023 ರಿಂದ 2024 ಜೂನ್ 30 ರವರೆಗಿನ ಅಪರಾಧ ಪ್ರಕರಣಗಳ ಸಂಖ್ಯೆ ಹೀಗೊಂದು ಆತಂಕ ಮೂಡಿಸಿದ್ದಂತು ಸತ್ಯ. ಈ ಅವಧಿಯಲ್ಲಿ ರಾಜ್ಯದಲ್ಲಿ 1927 ಕೊಲೆ, 1910 ಸುಲಿಗೆ, 5,810 ಅಪಹರಣ ಹಾಗೂ 263 ದರೋಡೆ ಪ್ರಕರಣಗಳು ವರದಿಯಾಗಿವೆ. ಈ ಅಂಕಿ-ಸಂಖ್ಯೆ ಗಮನಿಸಿದರೆ, ರಾಜ್ಯದ ಕಾನೂನು ಸುವ್ಯವಸ್ಥೆ ಏನು ಮಾಡುತ್ತಿದೆ? ಎಂಬ ನೋವು ಕಾಡುತ್ತಿದೆ.

2023ರಿಂದ 2024ರ ಜೂನ್ ವರೆಗಿನ ಪ್ರಕರಣಗಳನ್ನು ಗಮನಿಸಿದಾಗ ಒಂದೇ ರೀತಿಯಲ್ಲಿ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಇಡೀ ವರ್ಷದಲ್ಲಿ 1,296 ಕೊಲೆ ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಜೂನ್ ಅಂತ್ಯದವರೆಗೆ 631 ದಾಖಲಾಗಿವೆ. ಸುಲಿಗೆಯ ಪ್ರಮಾಣವೂ ಕಡಿಮೆ ಆಗಿಲ್ಲ. ಕಳೆದ ವರ್ಷ 1246 ಪ್ರಕರಣಗಳು ದಾಖಲಾಗಿದ್ದರೆ ಈ ವರ್ಷ ಜೂನ್ ಅಂತ್ಯದವರೆಗೆ ಅರ್ಧ ವರ್ಷದಲ್ಲಿ 664 ಪ್ರಕರಣಗಳು ದಾಖಲಾಗಿವೆ. ಗಲಭೆ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಾಗಿರುವುದು ಕಂಡು ಬರುತ್ತಿದೆ. ಆದರೆ, ದರೋಡೆ ಪ್ರಕರಣ ಸಣ್ಣ ಪ್ರಮಾಣದಲ್ಲಿ ಕಡಿಮೆ ಆದಂತೆ ಗೋಚರಿಸುತ್ತಿದೆ.
ಬೆಳಗಾವಿಯಲ್ಲಿ ಯುವಕನೊಬ್ಬ ತಾನು ಪ್ರೀತಿಸಿದ್ದ ಯುವತಿಯ ಜೊತೆಗೆ ಪರಾರಿಯಾಗಿದ್ದ. ಇದರಿಂದ ರೊಚ್ಚಿಗೆದ್ದ ಯುವತಿಯ ಸಂಬಂಧಿಕರು ಯುಕನ ತಾಯಿಯನ್ನು ಬೆತ್ತಲೆ ಮಾಡಿ ಸಾರ್ವಜನಿಕವಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದರು. ಈ ಪೊಲೀಸ್ ವ್ಯವಸ್ಥೆಯ ವೈಫಲ್ಯಕ್ಕೆ ಹೈಕೋರ್ಟ್ ಕೂಡ ಗರಂ ಆಗಿತ್ತು. ಇತ್ತೀಚೆಗೆ ನಡೆದ ನಟ ದರ್ಶನ್ ಪ್ರಕರಣ ಕೂಡ ಇದೇ ಸಾಲಿಗೆ ಸೇರುತ್ತದೆ.
ಈ ಅಂಕಿ- ಸಂಖ್ಯೆಗಳನ್ನು ಗಮನಿಸಿಯಾದರೂ ಸರ್ಕಾರ ಹಾಗೂ ಗೃಹ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ, ಸಜ್ಜನರು, ಉತ್ತಮರು ಒಳ್ಳೆಯ ಶಾಂತಿಯ ಬದುಕು ಕಳೆಯುವಂತೆ ಮಾಡಬೇಕಿದೆ ಎಂಬುವುದು ಜನರ ಅಂಬೋಣವಾಗಿದೆ. ಇಲ್ಲವಾದರೆ,